ಬಾಗಲಕೋಟೆ ಮತಕ್ಷೇತ್ರದ ಹಂಡರಗಲ್ಲ, ಹಿರೇ ಮ್ಯಾಗೇರಿ, ಚಿಕ್ಕ ಮ್ಯಾಗೇರಿ, ಬೋಮ್ಮನಗಿ, ಡೊಮನಾಳದಲ್ಲಿ ಪ್ರಚಾರ ಸಭೆಗಳಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಮತಯಾಚನೆ ಮಾಡಲಾಯಿತು. 
ಜಿಲ್ಲೆ

ದೇಶ ರಕ್ಷಣೆ,ಭದ್ರತೆಗೆ ಮೋದಿ ಒತ್ತು

ಬಾಗಲಕೋಟೆ : ದೇಶದ ಜನತೆಗೆ ಮೂಲ ಸೌಕರ್ಯ ನೀಡುವುದರ ಜೋತಗೆ ದೇಶದ ರಕ್ಷಣೆ ಹಾಗೂ ಭದ್ರತೆಗೆ ಒತ್ತು ನೀಡಿದ್ದು ಪ್ರಧಾನಿ ಮೋದಿಯವರು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಶನಿವಾರ ಬಾಗಲಕೋಟೆ ಮತಕ್ಷೇತ್ರದ ಹಿರೇ ಮ್ಯಾಗೇರಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಮತಯಾಚನೆ ಮಾಡಿ ಮಾತನಾಡಿದರು.

ದೇಶದ ಜನರಿಗೆ ಮೂಲ ಸೌಕರ್ಯ ನೀಡುವುದರ ಜೋತೆಗೆ ದೇಶದ ಭದ್ರತೆಗಾಗಿ ದೇಶದ ಸೈನಿಕರಿಗೆ ಆಧುನಿಕ ಶಸ್ತ್ರಾಸ್ತ್ರ ನೀಡಿ ಅವರಿಗೆ ಬೆಂಬಲವಾಗಿ ನಿಂತವರು ಪ್ರಧಾನಿ ಮೋದಿಯವರು, ಜಿಲ್ಲೆಯಲ್ಲಿ ಗದ್ದಿಗೌಡರ ಜಿಲ್ಲೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ,ಮತ್ತೋಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ತಪ್ಪದೆ ಮತ ನೀಡಿ ಎಂದರು.

ಗ್ರಾಮದ ಹಿರಿಯರಾದ ಚಂದನಗೌಡ ಹೋಸಗೌಡರ ಮಾತನಾಡಿ ಕಾಂಗ್ರೆಸ್ಸಿನಿಂದ ಒಂದು ಸಮುದಾಯದ ಓಲೈಸುವ ಸುಷ್ಟೀಕರಣ ನೀತಿ ಅನುಸರಿಸುತ್ತಿದೆ, ಕಾಂಗ್ರೆಸ್ಸಿನ ಗ್ಯಾರಂಟಿ ನಂಬಿ ದೇಶದ ಭವಿಷ್ಯ ಕಳೆದುಕೊಳ್ಳಬೇಡಿ, ದೇಶದ ಸುರಕ್ಷತೆಗಾಗಿ ಮೋದಿಯನ್ನು ಬೆಂಬಲಿಸಿ ಎಂದರು.

ಸಭೆಯಲ್ಲಿ ಪ್ರಭುಸ್ವಾಮಿ ಸರಗಣಾಚಾರಿ.ಸಂಗಣ್ಣ ಕಲಾದಗಿ,ಸುರೇಶ ಕೊಣ್ಣೂರ, ಸಂಗಣ್ಣ ಸೂಡಿ, ಶಿವಯೋಗಪ್ಪ ಬೇನಕಟ್ಟಿ, ಸಿದ್ದಪ್ಪ ಕತ್ತಿ, ಶಾಂತಪ್ಪ ಬೇನಕಟ್ಟಿ, ಮಹಾಂತಯ್ಯ ಹಿರೇಮಠ, ಕವಿರಾಜ ಬೇನಕಟ್ಠಿ, ಎಸ್ ಎಸ್ ಅಂಗಡಿ, ಮಲ್ಲನಗೌಡ ಹೋಸಗೌಡರ, ಈರಪ್ಪಯ್ಯ ವೀರಕ್ತಮಠ, ಚಂದನಗೌಡ ಹೋಸಗೌಡರ, ಡಾ.ಜಗದೀಶ ಹುನಗುಂದ, ಪ್ರಕಾಶ ಸರಗಣಾಚಾರಿ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಅನೇಕರು ಇದ್ದರು.