ಜಿಲ್ಲೆ

ದೇಶ ನಿರ್ಮಾಣಕ್ಕಾಗಿ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳಿ

ಯಾದಗಿರಿ: ಅಖಂಡ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಯುವಕರು ಸಹ ಭಾರತಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್ ಮನವಿ ಮಾಡಿದರು.

ನಗರದ ಜವಾಹರ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಸಂಜೆ ಭಾರತಜೋಡೋ ಯಾತ್ರಾ ನಿಮಿತ್ತ ಆಯೋಜಿಸಿದ್ದ ಸರ್ವಧರ್ಮ ಸದ್ಭಾವನಾ ಸಭೆಯಲ್ಲಿ ಮಾತನಾಡಿ, ಭಾರತ ಸರ್ವಧರ್ಮಗಳ ತವರು ದೇಶವಾಗಿದೆ. ಸಾವಿರಾರು ಬುಡಕಟ್ಟಿನ ಸಂಸ್ಕೃತಿಯನ್ನು ಒಳಗೊಂಡ ಬೃಹತ್ ಆಲದ ಮರದಂತೆ, ಇಂದು ಸಮಾಜದಲ್ಲಿ ಎಲ್ಲ ವರ್ಗದ ಜನತೆ ಪರಸ್ಪರ ಸಹೋದರರಂತೆ ಜೀವನ ನಡೆಸುತ್ತಿದ್ದೇವೆ ಎಂದರು.

ಕಳೆದ 10 ವರ್ಷಗಳಲ್ಲಿ ದೇಶ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಜಾಗತಿಕ ಮಟ್ಟದಲ್ಲಿ ಭಾರತ ಹಸಿವು, ಬಡತನ ಹಾಗೂ ನಿರುದ್ಯೋಗದಿಂದ ತಾಂಡವವಾಡುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಕೇಂದ್ರ ಸಕರ್ಾರದ ಏಕಪಕ್ಷೀಯ ನೀತಿಯಿಂದಾಗಿ ದೇಶದ ಬಡ ಮತ್ತು ಮಧ್ಯಮ ವರ್ಗದ ಜನತೆ ನಿತ್ಯ ಸಂಕಷ್ಟ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾತನಾಡಿ, ಹಲವು ಶತಮಾನಗಳಿಂದ ಭಾರತ ಇನ್ನಿತರ ದೇಶಗಳಿಗೆ ಮಾದರಿಯಾಗಿ ನಿಂತಿದೆ. ನಮ್ಮಲ್ಲಿ ಹೆಜ್ಜೆ, ಹೆಜ್ಜೆಗೆ ಸಂಪ್ರದಾಯ, ಭಾಷೆಗಳು ಬದಲಾಗುತ್ತವೆ. ಸಾವಿರಾರು ಜಾತಿ, ಉಪಜಾತಿಗಳನ್ನ ಹೊಂದಿರುವ ನಮ್ಮ ದೇಶ ಒಗ್ಗಟ್ಟಿನಲ್ಲಿ ಐಕ್ಯತೆಯ ಸಂದೇಶ ಸಾರಿದೆ ಎಂದರು.

ಸಭೆಯ ಸಾನಿಧ್ಯ ಶ್ರೀ ಷಟ್ಪದಿ ಬ್ರಹ್ಮ ಶಿವಾಚಾರ್ಯರು ಕಡೇಚೂರು, ಫಾ.ಜೋಸೆಫ್, ಜೈನ್ ಧರ್ಮಗುರು ಸಚಿನ್ ಪಂಡಿತ್ ವಹಿಸಿದ್ದರು. ಎ.ವಸಂತಕುಮಾರ, ಕೆಪಿಸಿಸಿ ಉಪಾಧ್ಯಕ್ಷರೂ ಆದ ಜಿಲ್ಲಾ ವೀಕ್ಷಕ ಶರಣಪ್ಪ ಮಟ್ಟೂರ ಮಾತನಾಡಿ, ಕಾಂಗ್ರೆಸ್ ಮುಖಂಡರಾದ ಎ.ಸಿ.ಕಾಡ್ಲೂರ, ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಜಿಪಂ ಮಾಜಿ ಅಧ್ಯಕ್ಷ ಬಸರಡ್ಡಿ ಅನಪುರ, ಶರಣಪ್ಪ ಮಾನೇಗಾರ, ಶ್ರೀನಿವಾಸರಡ್ಡಿ ಕಂದಕೂರ, ಮಂಜೂಳಾ ಗೂಳಿ, ಡಾ.ಭೀಮಣ್ಣ ಮೇಟಿ, ಮಾಣೀಕರಡ್ಡಿ ಕುರಕುಂದ, ರಾಘವೇಂದ್ರ ಮಾನಸಗಲ್, ಇಫರ್ಾನ್ ಕಾಡ್ಲೂರು, ಸಾಬರಡ್ಡಿ ಕಲಬುರಗಿ ಇದ್ದರು.