ಜಿಲ್ಲೆ

ದೇಶ ಆರ್ಥಿಕವಾಗಿ ಸದೃಢವಾಗಿದೆ

ಹುಬ್ಬಳ್ಳಿ: ವಿಶ್ವದ ಹಲವು ರಾಷ್ಟ್ರಗಳ ಆರ್ಥಿಕ ಸ್ಥಿತಿಯಲ್ಲಿ ಹಿನ್ನಡೆಯಾದರೂ ಭಾರತ ಆರ್ಥಿಕವಾಗಿ ಸದೃಢವಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಕಾರಣ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ನ ಬಯೋಟೆಕ್ ಸಭಾಭವನದಲ್ಲಿ ಶುಕ್ರವಾರ ರೋಜಗಾರ ಮೇಳದಲ್ಲಿ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.

ಅಕ್ಟೋಬರ್​ನಲ್ಲಿ 75 ಸಾವಿರ, ನವೆಂಬರ್​ನಲ್ಲಿ 72 ಸಾವಿರ ಹಾಗೂ ಇಂದು 70 ಸಾವಿರ ಜನರಿಗೆ ಉದ್ಯೋಗ ನೇಮಕಾತಿ ಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಹಾಗೂ ಸಿಲ್ಕ್ ಇಂಡಿಯಾ ಉಪಕ್ರಮಗಳ ಮೂಲಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದೆ. ಇದೀಗ ರೋಜಗಾರ ಮೇಳದ ಮೂಲಕ 10ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ದೇಶ ಬಲಯುತವಾಗುತ್ತಿದೆ ಎಂದರು.

ಅದಾಯ ತೆರಿಗೆ ಆಯುಕ್ತ ಮನೋಜ ಜೋಶಿ, ಇತರರು ಇದ್ದರು.