ಕೊಡೇಕಲ್: ದೇವಿ ಪುರಾಣ ಆಲಿಸುವುದರಿಂದ ನಮ್ಮ ಜೀವನದ ಚಿಂತೆ ದೂರವಾಗಿ ಶಾಂತಿ ಮತ್ತು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಪುರಾಣಿಕ ಗದುಗಿನ ಪುಟ್ಟರಾಜ ಶಾಸ್ತಿç ಹೇಳಿದರು.
ಗ್ರಾಮದೇವತೆ ದ್ಯಾಮ್ಮಮ್ಮ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಬುಧವಾರ ಹಮ್ಮಿಕೊಂಡ ದೇವಿ ಪುರಾಣದಲ್ಲಿ ಮಾತನಾಡಿದ ಅವರು, ಭಗವಂತನ ನಾಮ ಸ್ಮರಣೆಯಿಂದ ಮನಸ್ಸು ಶುಚಿಯಾಗಿಟ್ಟುಕೊಳ್ಳಬಹುದು. ಹೀಗಾಗಿಯೇ ಹಿರಿಯರು ಹಬ್ಬ ಹರಿದಿನಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ ದೇವಿ ಪುರಾಣ ಪಾರಾಯಣದಿಂದ ಭಯ ದೂರವಾಗಿ ಶಾಂತಿ, ನೆಮ್ಮದಿ ದೊರಕುತ್ತದೆ ಅಲ್ಲದೆ ನಿಸ್ವಾರ್ಥ ಜೀವನ ಮಾರ್ಗ ಬೋಧಿಸುತ್ತದೆ ಎಂದರು.
ದೇವಿ ಪುರಾಣ ಕೇವಲ ಪುರಾಣವಲ್ಲ ಇದು ದೇಹದ ಮಹತ್ವವನ್ನು ಸಾರುತ್ತದೆ, ಕ್ರೋಧದಿಂದ ಏನನ್ನೂ ಗೆಲ್ಲಲಾಗದು, ಲೌಕಿಕ ವಸ್ತು ವಿಷಯಗಳಿಗೆ ಮಹತ್ವ ನೀಡಬಾರದು. ಮನಸ್ಸನ್ನು ನಿಯಂತ್ರಿಸಿ ತಾನೇ ಸ್ವತಃ ದೇವಿಯಾಗುವುದೇ ದೇವಿ ಪುರಾಣದ ಆಶಯವಾಗಿದೆ ಎಂದರು.
ದೇವಿಯ ೯ ಅವತಾರಗಳು ಜೀವನಕ್ಕೆ ಶಿಸ್ತು ಒದಗಿಸುವುದರ ಜತೆಗೆ ಮಾನಸಿಕ, ಬೌದ್ಧಿಕ ಆತ್ಮಶಕ್ತಿ ನೀಡುವ ಮೂಲಕ ಸಾಧನೆಯ ಗುಣ ಪ್ರೇರೇಪಿಸುತ್ತದೆ. ಪ್ರತಿದಿನ ದೇವಿ ಪುರಾಣವನ್ನು ಭಕ್ತಿಯಿಂದ ಪಾರಾಯಣ ಮಾಡಿದರೆ ಸಾಕಷ್ಟು ಪುಣ್ಯ ಲಭಸಿಸುತ್ತಿದೆ. ಅಲ್ಲದೆ ಕೊಡೇಕಲ್ ಗ್ರಾಮಸ್ಥರು ಸಂಸ್ಕಾರವAತರಾಗಿದ್ದಾರೆ. ಭಾವೈಕ್ಯತೆಯ ಈ ಪಾವನ ಭೂಮಿಯಲ್ಲಿ ಕಳೆದ ೨೬ ವರ್ಷಗಳಿಂದ ದೇವಿ ಪುರಾಣ ನಡೆದುಕೊಂಡು ಬರುತ್ತಿರುವುದು ಈ ಗ್ರಾಮದ ಜನತೆಯ ಭಕ್ತಿಗೆ ಸಾಕ್ಷಿಯಾಗಿದೆ ಎಂದರು.
ಶ್ರೀ ವೃಷಭೇಂದ್ರ ಅಪ್ಪ, ಶ್ರೀ ಶಿವಕುಮಾರ ಸ್ವಾಮೀಜಿ, ರಾಜಾ ಜಿತೇಂದ್ರನಾಯಕ ಜಹಾಗೀರದಾರ್, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ್, ರಂಗನಾಥ ದೋರಿ, ಶಾಮಸುಂದರ ಜೋಶಿ, ಬಸಲಿಂಗಯ್ಯ ಮಠ, ಬಸಣ್ಣ ಕಂಚಗಾರ, ಬೊಮ್ಮಣ್ಣ ಪತ್ತಾರ, ಕನಕು ಜಿರಾಳ, ಮಲ್ಲು ನವಲಗುಡ್ಡ, ಗ್ರಾಪಂ ಅಧ್ಯಕ್ಷ ಶಿವಶರಣ ಕುಂಬಾರ, ಸೋಮಲಿಂಗಪ್ಪ ದೋರಿ, ವೆಂಕಟೇಶ ಜೋಶಿ, ಬಸನಗೌಡ ಮಾಲಿಗೌಡ್ರ, ವಸಂತಗೌಡ, ಮಲ್ಲಣ್ಣ ಹೂಗಾರ, ನಿಜಲಿಂಗಪ್ಪ ಬಡಿಗೇರ, ರಮೇಶ ಬಿರಾದಾರ, ಅಯ್ಯಪ್ಪ ಪಡಶೆಟ್ಟಿ, ಸಂಗಪ್ಪ ಶಿವಪೂರ, ರವಿಂದ್ರ ಅಂಗಡಿ, ಡಾ.ಬಿ.ಬಿ.ಬಿರಾದಾರ ಇತರರಿದ್ದರು.
ದೇವರಾಜ ಹಾಗೂ ನಾಗರಾಜ ಹೂಗಾರ ಸಹೋದರರು ಸಂಗೀತ ಸೇವೆ ನಡೆಸಿಕೊಟ್ಟರು.
ನವರಾತ್ರಿ ನಿಮಿತ್ತ ದೇವಿ ಪುರಾಣ ಶುಕ್ರವಾರ ಸಮಾರೋಪಗೊಳ್ಳಲಿದೆ. ಮಧ್ಯಾಹ್ನ ೧೨ಕ್ಕೆ ಧಾರ್ಮಿಕ ಸಭೆ ಹಮ್ಮಿಕೊಳ್ಳಲಾಗಿದೆ. ಶ್ರೀ ವೃಷಭೇಂದ್ರ ಅಪ್ಪ, ಶ್ರೀ ಗುರುದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸೇವಾ ಸಮಿತಿ ತಿಳಿಸಿದೆ.