ಜಿಲ್ಲೆ

ದೇವಾಲಯಕ್ಕೆ ರಾಜಗೋಪುರವೇ ಭೂಷಣ

ಚನ್ನರಾಯಪಟ್ಟಣ: ದೇವಾಲಯಕ್ಕೆ ರಾಜಗೋಪುರವೇ ಭೂಷಣ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.ಪಟ್ಟಣದ ಕೋಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ನೂತನ ರಾಜಗೋಪುರ ನಿರ್ಮಾಣಕ್ಕೆ ಸೋಮವಾರ ಚಾಲನೆ ನೀಡಿದ ನಂತರ ಅವರು ಆಶೀರ್ವಚನ ನೀಡಿದರು. ದೇವಾಲಯ ಮತ್ತು ಮಠಗಳಲ್ಲಿ ನಿರಂತರ ಧಾರ್ಮಿಕ ಚಟುವಟಿಕೆ ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಈ ನಿಟ್ಟಿನಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಆಗಬೇಕು ಎಂದು ಅವರು ಆಶಿಸಿದರು.
ಮಠದ ಪ್ರಧಾನ ಅರ್ಚಕ ಕೆ.ವಿ.ಅನಂತಾಚಾರ್ಯ ಪೂಜಾವಿಧಿಗಳನ್ನು ನೆರವೇರಿಸಿದರು. ಮಠದ ಕಾರ್ಯದರ್ಶಿ ಸಿ.ಎನ್. ಪುಟ್ಟಸ್ವಾಮಿಗೌಡ, ಖಜಾಂಚಿ ರಾಘವೇಂದ್ರ, ನಿರ್ದೇಶಕರಾದ ತಿರುಮಲ, ಹರ್ಷ, ದೀಪು, ವ್ಯವಸ್ಥಾಪಕ ಮುರಳಿ ಇತರರು ಇದ್ದರು.