ಕೆ.ಎಂ.ದೊಡ್ಡಿ: ಸಮೀಪದ ಬೊಮ್ಮನದೊಡ್ಡಿ ಗ್ರಾಮದಲ್ಲಿ ಕೋಣಕಟ್ಟೆ ಮಾರಮ್ಮ ದೇವಾಲಯ ನಿರ್ಮಾಣಕ್ಕೆ ಉದಯ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ಕದಲೂರು ಉದಯ್ ಭೂಮಿಪೂಜೆ ನೆರವೇರಿಸಿದರು.
ದೇವಾಲಯದ ನಿರ್ಮಾಣಕ್ಕೆ ಧನ ಸಹಾಯ ನೀಡಿ ಮಾತನಾಡಿದ ಅವರು, ದೇವಸ್ಥಾನಗಳಿಂದ ಧರ್ಮ ಉಳಿಯುತ್ತದೆ. ಗ್ರಾಮದಲ್ಲಿ ಶಾಂತಿ ನೆಲೆಸಿ ಸೌಹಾರ್ದತೆ ವೃದ್ಧಿಯಾಗಲಿದೆ ಎಂದರು. ಗ್ರಾಮಸ್ಥರ ಮನವಿ ಮೇರೆಗೆ ದೇವಾಲಯದ ನಿರ್ಮಾಣಕ್ಕೆ ಧನ ಸಹಾಯ ಮಾಡುತ್ತಿದ್ದೇನೆ ವಿನಃ ಯಾವುದೇ ದುರುದ್ದೇಶವಿಲ್ಲ. ಮಾರಮ್ಮ ದೇವಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಆಶಿಸಿದರು. ಮುಖಂಡರಾದ ಬಸವಲಿಂಗೇಗೌಡ, ಶಿವರಾಜು, ಪುಟ್ಟ, ಕೃಷ್ಣ, ಸಾಗರ, ಪಿಡ್ಡೆ, ಜವರೇಗೌಡ, ನಟರಾಜು ಮತ್ತಿತರರು ಇದ್ದರು.