ಹೂವಿನಹಿಪ್ಪರಗಿ ಸಮೀಪದ ಹುಣಶ್ಯಾಳ ಪಿಬಿ ಗ್ರಾಮದ ಲಕ್ಕಮ್ಮ ದೇವಿ ದೇವಸ್ಥಾನದಲ್ಲಿ ಪ್ರದಕ್ಷ್ಷಿಣೆ ಹಾಕಿದ ಶ್ವಾನ. 
ಜಿಲ್ಲೆ

ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿದ ಶ್ವಾನ

ಹೂವಿನಹಿಪ್ಪರಗಿ: ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಅಂಥ ಶ್ವಾನವೊಂದು ತನ್ನಷ್ಟಕ್ಕೆ ತಾನೇ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದ್ದು ಭಕ್ತರ ಅಚ್ಚರಿಗೆ ಕಾರಣವಾಗಿದೆ.

ಸಮೀಪದ ಹುಣಶ್ಯಾಳ ಪಿಬಿ ಗ್ರಾಮದ ಹೊಸೂರು ಲಕ್ಕಮ್ಮದೇವಿ ದೇವಸ್ಥಾನದಲ್ಲಿ ಗುರುವಾರ ಬೆಳಗಿನ ಜಾವ ಶ್ವಾನವೊಂದು ಪ್ರದಕ್ಷಿಣೆ ಹಾಕಿ ನೋಡುಗರ ಗಮನ ಸೆಳೆದಿದೆ. ಲಕ್ಕಮ್ಮ ದೇವಿ ಊರಿನ ಆರಾಧ್ಯ ದೈವವಾಗಿದ್ದಾಳೆ. ಬಸವನಬಾಗೇವಾಡಿ, ಹೂವಿನಹಿಪ್ಪರಗಿ, ಕರಭಂಟನಾಳ, ಸಂಕನಾಳ ಸೇರಿ ಸುತ್ತಮುತ್ತಲಿನ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಲಕ್ಕಮ್ಮ ದೇವಿಗೆ ನಮಸ್ಕರಿಸಿ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.

ಪ್ರತಿ ಶುಕ್ರವಾರ ವಿವಿಧ ಗ್ರಾಮಗಳ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ. ಅಪಾರ ಮಹಿಮೆ ಹೊಂದಿರುವ ಈ ದೇವಸ್ಥಾನದಲ್ಲಿ ಆಶ್ಚರ್ಯಕರ ಎಂಬಂತೆ ಗುರುವಾರ ಬೆಳಗಿನ ಜಾವ ಶ್ವಾನವೊಂದು ಪ್ರದಕ್ಷಿಣೆ ಹಾಕಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಅದನ್ನು ದೇವಸ್ಥಾನ ಆವರಣದಿಂದ ಹೊರಗೆ ಕಳಿಸಿದರೂ ಮತ್ತೆ ಒಳಗೆ ಬಂದು ಪ್ರದಕ್ಷಿಣೆ ಹಾಕಿದೆ. ಭಕ್ತರು ಇದು ದೇವಿ ಮಹಿಮೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.