ಜಿಲ್ಲೆ

ದೇವಸ್ಥಾನ ನಿರ್ಮಾಣ ಕಾರ್ಯ ಮಾದರಿ

ಟಪ್ರಭಾ: ನಲ್ಲಾನಟ್ಟಿ ಗ್ರಾಮಸ್ಥರು ಸತತ ಪ್ರಯತ್ನದಿಂದ ಗ್ರಾಮದಲ್ಲಿ ವಿವಿಧ ದೇವಸ್ಥಾನ ನಿರ್ಮಾಣ ಮಾಡಿರುವ ಕಾರ್ಯ ತಾಲೂಕಿಗೆ ಮಾದರಿಯಾಗಿದೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ನಲ್ಲಾನಟ್ಟಿ ಗ್ರಾಮದಲ್ಲಿ ಸೋಮವಾರ ಶ್ರೀಲಕ್ಷಿ$್ಮದೇವಿ ದೇವಸ್ಥಾನದ ಬಳಿ ರಾಜ್ಯಸಭೆ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ ನೂತನ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಗ್ರಾಮದೇವತೆ ಲಕ್ಷಿ$್ಮದೇವಿ ದೇವಸ್ಥಾನ ಉತ್ತಮವಾಗಿ ಜೀಣೋರ್ದ್ಧಾರ ಮಾಡಲಾಗಿದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಿಗೆ ಜನರ ಸಹಕಾರ ಅಗತ್ಯವಾಗಿದೆ ಎಂದರು.

ಚಿತ್ರದುರ್ಗ ಭಗೀರಥ ಪೀಠದ ಪುರುಷೋತ್ತಾನಂದಪುರಿ ಸ್ವಾಮೀಜಿ, ನಾಗೇಶ್ವರ ಸ್ವಾಮೀಜಿ, ನಿಜಗುಣ ದೇವರು, ಮಲ್ಲಿಕಾರ್ಜುನ ಸ್ವಾಮೀಜಿ, ರಂಗಪ್ಪ ಕುಳ್ಳೂರ, ಶಂಕರ ಜಾಗನೂರ, ಅಡಿವೆಪ್ಪ ಬಿಲಕುಂದಿ, ಮಾರುತಿ ಮೆಳವಂಕಿ, ಮಲ್ಲಪ್ಪ ಪೂಜೇರಿ, ಹನುಮಂತ ಪಾಟೀಲ, ರಾಮಚಂದ್ರ ಕುಳ್ಳೂರ, ಲಗಮಣ್ಣ ಕುಳ್ಳೂರ, ರಾಮಪ್ಪ ಪೂಜೇರಿ, ಭೀಮಪ್ಪ ಪಾಟೀಲ, ಪ್ರಕಾಶ ಜಾಗನೂರ, ಮುದಕಪ್ಪ ಗದಾಡಿ ಇತರರಿದ್ದರು.