ಬಾಗಲಕೋಟೆಯ ವೆಂಕಟಪೇಟೆಯ ವೆಂಕಟೇಶ್ವರ ದೇವರಿಗೆ ವಿವಿಧ ರೂಪಾಲಂಕಾರ  
ಜಿಲ್ಲೆ

ದೇವಲೋಕವೇ ಧರಿಗಿಳಿಸುವ ಶೃಂಗಾರ..!

ಸಂತೋಷ ಕೃ. ದೇಶಪಾಂಡೆ ಬಾಗಲಕೋಟೆ:
ದಸರಾ ಉತ್ಸವದ ಸಂಭ್ರಮ, ಸಡಗರ ಎಲ್ಲೆಡೆ ಮನೆ ಮಾಡಿದೆ. ಉಪವಾಸ, ವೃತಾಚರಣೆ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುತ್ತಿದ್ದಾರೆ ಭಕ್ತರು. ಇನ್ನೊಂಡೆ ದೇವರಿಗೆ ಮಾಡುವ ವಿವಿಧ ರೂಪಗಳ ಅಲಂಕಾರ ಗಮನ ಸೆಳೆಯುತ್ತಿವೆ. ಅಕ್ಷರಶಃ ದೇವ ಲೋಕವೇ ಧರಿಗಿಳಿದು ಬದ್ದಂತೆ ಭಾಸವಾಗುತ್ತಿದೆ..!!

ನವರಾತ್ರಿ ಅಂಗವಾಗಿ ಬಾಗಲಕೋಟೆ ನಗರದ ಅಂಭಾಭವಾನಿ, ಎಂ.ಜಿ.ಭವಾನಿ ದೇವಸ್ಥಾನ, ವೆಂಕಟಪೇಟೆಯ ವೆಂಕಟೇಶ್ವರದಲ್ಲಿ ನಿತ್ಯವು ಹೊಸ ಹೊಸ ರೂಪಗಳಲ್ಲಿ ದೇವರನ್ನು ಅಲಂಕರಿಸಲಾಗಿತ್ತಿದ್ದು, ಕಲಾವಿದರ ಕೈಚಳಕಕ್ಕೆ ಭಕ್ತರು ಮನಸೋತಿದ್ದಾರೆ. ದೇವರ ನಾನಾ ಸ್ವರೂಪವನ್ನು ಮೂರ್ತಿಗಳಲ್ಲಿ ಅರಳಿಸುವ ಮೂಲಕ ಭಕ್ತಿ ಇಮ್ಮಡಿಗೊಂಡಿದೆ.

ವಿಶೇಷ ಅವತಾರಗಳಲ್ಲಿ ವೆಂಕಟೇಶ್ವರ
ತನ್ನಯಾದ ವೈಶಿಷ್ಠ ಹೊಂದಿರುವ ವೆಂಕಟಪೇಟೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಸಂತಸ ಮನೆ ಮಾಡಿದೆ. ನಿತ್ಯ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ ನಡೆಯುತ್ತಿದೆ. ಇದರೊಂದಿಗೆ ವೆಂಕಟೇಶ್ವರ ದೇವರಿಗೆ ಪ್ರತಿದಿನವು ವಿಶೇಷ ರೂಪಾಲಾಂಕರ ಮಾಡುತ್ತಿದ್ದು, ಆಕರ್ಷಕವಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಮತ್ಸ್ಯ, ಕೊಲ್ಲಾಪುರ ಮಹಾಲಕ್ಷಿ÷್ಮÃ, ನರಸಿಂಗ ಅವತಾರ, ವಾಮನ, ರಾಮಾಂಜನಯ, ರಾಯರ ವೃಂದಾವನ ಸೇರಿದಂತೆ ಅನೇಕ ಬಗೆ ದೇವರಿಗೆ ರೂಪ ನೀಡಲಾಗುತ್ತದೆ.

ಉಪವಾಸ ಮೂಲಕ ಅಲಂಕಾರ..
ಬಾಗಲಕೋಟೆಯ ಸಂಜೀವ ಕುಲಕರ್ಣಿ ನುರಿತ ಕಲಾವಿದರಾಗಿದ್ದು, ನಿತ್ಯವು ತಮ್ಮ ತಂಡದೊಂದಿಗೆ ಉಪವಾಸದ ಮೂಲಕ ವೆಂಕಟೇಶ್ವರನಿಗೆ ಅಲಂಕರಿಸುತ್ತಿದ್ದಾರೆ. ಮಧ್ಯಾಹ್ನ ೧೨ ಗಂಟೆಗೆ ಆರಂಭವಾಗುವ ಅಲಂಕಾರ ಸಂಜೆ ೫ ಗಂಟೆ ವರೆಗೆ ೫ ಗಂಟೆಗಳ ಕಾಲ ವಿಶೇಷ ರೂಪವನ್ನು ನೀಡುತ್ತಿದ್ದಾರೆ. ನವರಾತ್ರಿಗ್ಗಿಂತ ಒಂದು ವಾರಗಳ ಕೆರೆಯಿಂದ ಕಪ್ಪು ಮಣ್ಣು ಸಂಗ್ರಹಿಸಿ ಅದನ್ನು ಮೃದವಾದ ರೂಪಕ್ಕೆ ತರುತ್ತಾರೆ. ಬಳಿಕ ವಿವಿಧ ವಸ್ತುಗಳನ್ನು ಬಳಸಿ ನಿತ್ಯವು ಅಲಂಕಾರ ಮಾಡುತ್ತಾರೆ. ೨೦ ವರ್ಷಗಳಿಂದ ಸೇವಾ ಕಾರ್ಯ ಮುಂದುವರೆಸಿದ್ದು ಬಾಗಲಕೋಟೆ ನಗರದಲ್ಲಿ ವಿಶೇಷವಾದ ಮನ್ನಣೆ ಪಡೆದಿದೆ.

ಇವರಿಗೆ ಕೇಶವ ರಘವೀರ, ಶ್ರೀನಿಽ ಗುಡಿ, ಜಯತೀರ್ಥ ಕಟ್ಟಿ, ಸಮೀರ ಗಲಗಲಿ, ಭೀಮಾಶಂಕರ ನಾಡಗೌಡ, ವೆಂಕಟೇಶ ರಘವೀರ ೮ ಕ್ಕೂ ಹೆಚ್ಚು ಜನ ಸಾಥ್ ನೀಡುತ್ತಾರೆ. ಈ ತಂಡ ಮಾಡಿದ ರೂಪಾಲಂಕಾರ ನೋಡಲು ಜನ ಮುಗಿ ಬೀಳುತ್ತಾರೆ. ಸಾಕ್ಷತ ದೇವರೇ ಕಣ್ಣು ಮುಂದೆ ಬಂದು ನಿಂತತ್ತೆ ಭಾಸವಾಗುತ್ತಿದೆ. ಇನ್ನು ೫ ದಿನಗಳ ಅನೇಕ ವಿಶೇಷ ಅಲಂಕಾರ ಮಾಡಲು ಸಿದ್ಧತೆ ನಡೆಸಿದ್ದು, ಭಕ್ತರು ತಮಗೆ ಇಷ್ಟದ ದೇವರ ರೂಪ ವೆಂಕಟೇಶ್ವರನಿಗೆ ನೀಡಲು ಕೋರಿಕೆ ಸಲ್ಲಿಸುತ್ತಿದ್ದಾರೆ.