ಗದಗ: ವಿಶ್ವಕರ್ಮ ಸಮುದಾಯದ ಮೂಲ ಮಹಾಪುರುಷ, ದೇವಶಿಲ್ಪಿ ವಿಶ್ವಕರ್ಮರು ದೇವಲೋಕದ ವಾಸ್ತುಶಿಲ್ಪಿಯಾಗಿದ್ದರು ಎಂದು ಭಾಗವತ, ಉಪನಿಷತ್ತು, ಪುರಾಣಗಳಿಂದ ತಿಳಿದುಬರುತ್ತದೆ ಎಂದು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಡಿ. ಕಡ್ಲಿಕೊಪ್ಪ ಹೇಳಿದರು.
ನಗರದ ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಬೆನ್ನೆಲುಬು ರೈತನಾದರೆ, ರೈತನ ಬೆನ್ನೆಲುಬಾಗಿ ಮಾನವ ಸಮುದಾಯದ ಸೇವೆ ಸಲ್ಲಿಸುತ್ತ ಬಂದಿರುವ ವಿಶ್ವಕರ್ಮ ಸಮುದಾಯದ ಏಳಿಗೆಗೆ ಸರ್ಕಾರ ಹೆಚ್ಚಿನ ಪ್ರಾಶಸ್ಱ ನೀಡಬೇಕು. ಕಸುಬಿನಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ವಿಶ್ವಕರ್ಮ ಸಮುದಾಯದ ಯುವಕರಿಗೆ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದರು.
ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಲಾಯಿತು. ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವಿಶ್ವನಾಥ ಕಮ್ಮಾರ, ವಿಶ್ವಕರ್ಮ ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ನೇತ್ರಾವತಿ ಬಡಿಗೇರ, ಕೆ.ಎಸ್. ಬಡಿಗೇರ, ಜಿಲ್ಲಾ ವಿಶ್ವಕರ್ಮ ಮಹಿಳಾ ಮಂಡಳದ ಅಧ್ಯಕ್ಷೆ ಶಿವಲೀಲಾ ಬಡಿಗೇರ, ವಿಶ್ವಕರ್ಮ ಸಾಹಿತ್ಯ, ಕಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ಸಿ.ಎಂ.ಪತ್ತಾರ, ಸುಮಂಗಲಾ ಪತ್ತಾರ, ಆನಂದ ಕಮ್ಮಾರ, ಶಂಕರಾಚಾರ್ಯ ಕಂಚಗಾರ ಮತ್ತಿತರರು ಇದ್ದರು.
ಜಯಂತಿ ಆಚರಣೆ: ಗದಗ ಸಿದ್ಧಲಿಂಗನಗರ ಬಸವೇಶ್ವರ ಶಾಲೆ ಹತ್ತಿರದ ಕಚೇರಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕದ ವತಿಯಿಂದ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಶಿವಪ್ಪ ಕಮ್ಮಾರ, ಗೋವಿಂದಪ್ಪ ಬಡಿಗೇರ, ಆನಂದ ಕಮ್ಮಾರ, ಗೋಪಾಲ ಬಡಿಗೇರ, ನಾಗಲಿಂಗಪ್ಪ ಪತ್ತಾರ, ಐ.ಜಿ. ಬಡಿಗೇರ, ಕಾಳಪ್ಪ ಬಡಿಗೇರ, ಶ್ರೀಧರ ಬಡಿಗೇರ ಮತ್ತಿತರರು ಇದ್ದರು.
ವಿಶ್ವಕರ್ಮರ ಕೊಡುಗೆ ಅಪಾರ
ನರೇಗಲ್ಲ: ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯ ನೀಡಿರುವ ಕೊಡುಗೆ ಅಪಾರ ಎಂದು ವಿಶ್ವಕರ್ಮ ಸಮಾಜದ ಮುಖಂಡ ನಾರಾಯಣ ವಡ್ಡಟ್ಟಿ ಹೇಳಿದರು.
ಪಟ್ಟಣದ ಪಪಂ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ‘ಅನಾದಿ ಕಾಲದಿಂದಲೂ ದೇವಾಲಯಗಳ ನಿರ್ಮಾಣ ಕಾಲದಲ್ಲಿ ಶಿಲ್ಪಕಲೆಯನ್ನು ನಿರ್ವಿುಸಿ ಅತ್ಯುತ್ತಮ ಕೊಡುಗೆ ನೀಡಿದವರು ವಿಶ್ವಕರ್ಮ ಸಮುದಾಯದವರು. ವಿಶ್ವಕರ್ಮ ಸಮುದಾಯ ಶಿಲ್ಪಕಲೆಯ ಆರಾಧಕರು, ಶಿಲ್ಪಕಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು. ಮಣ್ಣು, ಮರ, ಕಲ್ಲು, ಲೋಹಗಳನ್ನು ಬಳಸಿ ಸಾಧನ ಸಲಕರಣೆಗಳನ್ನು ಸಿದ್ಧಪಡಿಸುವ ಕೌಶಲವುಳ್ಳವರು. ಅವರ ಕೈಯಲ್ಲಿ ಮರದ ಕೊರಡು ಕಲೆಯಾಗುತ್ತದೆ, ಕಲ್ಲು ಶಿಲೆಯಾಗುತ್ತದೆ. ಜಾತಿ ಧರ್ಮ ತಾರತಮ್ಯವಿಲ್ಲದೆ ಎಲ್ಲ ಜನಾಂಗದವರನ್ನು ಸಮಾನವಾಗಿ ಕಂಡವರು ಎಂದರು.
ಪಪಂ ಕಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರಪ್ಪ ಕಜ್ಜಿ ಮಾತನಾಡಿ, ವಿಶ್ವಕರ್ಮ ಸಮಾಜ ಇಂದು ಕುಶಲ ಕರ್ವಿುಗಳಾಗಿ ಸಮಾಜದಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ ಗುರುತಿಸಿಕೊಟ್ಟ ಏಕೈಕ ಸಮಾಜವೆಂದರೆ ಅದು ವಿಶ್ವಕರ್ಮ ಸಮಾಜ. ಕರಕುಶಲಕ್ಕೆ ಹೆಚ್ಚಿನ ಮಹತ್ವಕೊಟ್ಟು ಕಲೆ ಉಳಿಸುವ ಮೂಲಕ ವಿಶ್ವಕರ್ಮ ಸಮಾಜವು ನಾಡಿಗೆ ಕೊಡುಗೆ ನೀಡಿದೆ ಎಂದರು.
ಮಲ್ಲಪ್ಪ ಮಾರನಬಸರಿ, ಎಸ್.ಎ. ಜಕ್ಕಲಿ, ಶೇಖಪ್ಪ ಹೊನವಾಡ, ನಾರಾಯಣಾಚಾರ ವಿಶ್ವಕರ್ಮ, ವಿಶ್ವನಾಥ ಬಡಿಗೇರ, ಅನಂತಪ್ಪ ಶರೆವಾಡ, ಶರಣಪ್ಪ ಬಡಿಗೇರ, ಮುತ್ತಣ್ಣ ಹೂಲಗೇರಿ ಇತರರಿದ್ದರು.
ವಿವಿಧೆಡೆ ಸಾಂಕೇತಿಕ ಆಚರಣೆ
ಮುಂಡರಗಿ: ವಿಶ್ವಕರ್ಮ ಸಮುದಾಯದವರು ಶ್ರಮಜೀವಿಗಳಾಗಿದ್ದು, ಅತ್ಯವಶ್ಯಕ ವಸ್ತುಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ಕೊಡುಗೆ ಅಪಾರವಾದದ್ದು ಎಂದು ತಹಸೀಲ್ದಾರ್ ಆಶಪ್ಪ ಪೂಜಾರಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ ಬಡಿಗೇರ ಮಾತನಾಡಿ, ‘ಕರೊನಾ ಹಿನ್ನೆಲೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ’ ಎಂದರು.
ಶಿರಸ್ತೇದಾರ್ ಎಸ್.ಎಸ್. ಬಿಚ್ಚಾಲಿ, ಮಹಾದೇವಪ್ಪ ಪತ್ತಾರ, ಸೋಮಣ್ಣ ಬಡಿಗೇರ, ಶಂಕ್ರಪ್ಪ ಅರ್ಕಸಾಲಿ, ಭೀಮಣ್ಣ ಕಮ್ಮಾರ, ಶಂಕ್ರಪ್ಪ ಮುರ್ಲಾಪೂರ, ನಾರಾಯಣಪ್ಪ ಸೂಡಿ, ಯಚರಪ್ಪ ಬಡಿಗೇರ ಇತರರಿದ್ದರು.
ಹಮ್ಮಿಗಿ ಗ್ರಾಮದಲ್ಲಿ: ತಾಲೂಕಿನ ಹಮ್ಮಿಗಿ ಗ್ರಾಮದ ಗ್ರಾ.ಪಂ.ಕಾರ್ಯಾಲಯದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ಐ.ಡಿ. ಪತ್ತಾರ, ಲಾವಪ್ಪ ಕಮ್ಮಾರ, ವೀರಣ್ಣ ಕಮ್ಮಾರ, ಸುರೇಶ ಕಮ್ಮಾರ, ಮೌನೇಶ ಬಡಿಗೇರ, ಪೂಜಾ ಕಮ್ಮಾರ, ಲಲಿತಾ ಬಡಿಗೇರ, ಕವಿತಾ ಪತ್ತಾರ ಇತರರು ಇದ್ದರು.