ಜಿಲ್ಲೆ

ದೇವರಿಗೆ ಭಕ್ತಿ-ಭಕ್ತ ಮುಖ್ಯ

ಹುಬ್ಬಳ್ಳಿ: ಶ್ರೀ ಸದ್ಗುರು ಸಿದ್ಧೇಶ್ವರ ಸ್ವಾಮೀಜಿ 102ನೇ ಪುಣ್ಯಾರಾಧನೆ ಹಾಗೂ ರಥೋತ್ಸವ ನಿಮಿತ್ತ ಉಣಕಲ್​ನ ಪಿ.ಬಿ. ರಸ್ತೆಯ ಶ್ರೀ ಸದ್ಗುರು ಸಿದ್ಧೇಶ್ವರ ಮಹಾಸ್ವಾಮೀಜಿಗಳ ಹೊಸಮಠದಲ್ಲಿ ಶ್ರೀಮಠದ ಟ್ರಸ್ಟ್ ಕಮಿಟಿಯಿಂದ ಇತ್ತೀಚೆಗೆ ಪ್ರವಚನ ಏರ್ಪಡಿಸಲಾಗಿತ್ತು.

ಧಾರವಾಡ ಶ್ರೀ ಮುರುಘಾ ಮಠದ ಶ್ರೀ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಜಂಜಡದ ಜೀವನಕ್ಕೆ ಶಾಂತಿ ಲಭಿಸಲು ಅಧ್ಯಾತ್ಮ ಅಗತ್ಯ. ಭಕ್ತರ ಮನಪರಿವರ್ತನೆ ಮಾಡಲು ಇಂದಿನ ದಿನಗಳಲ್ಲಿ ಪ್ರವಚನ ಅಗತ್ಯ. ದೇವರಿಗೆ ಭಕ್ತಿ-ಭಕ್ತ ಮುಖ್ಯ ಹೊರತು ಹಣ-ಅಂತಸ್ತು ಅಲ್ಲ ಎಂದರು.

ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಪ್ರವಚನ ನೀಡಿದರು. ಗುರುನಾಥ ಮುಳಗುಂದ, ಶ್ರೀ ಮಠದ ಟ್ರಸ್ಟ್ ಅಧ್ಯಕ್ಷ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು. ಎಸ್.ಐ. ನೇಕಾರ, ಚನಬಸಪ್ಪ ಧಾರವಾಡಶೆಟ್ಟರ, ಡಾ. ಸಿದ್ದಯ್ಯ ಹಿರೇಮಠ, ಸಿ.ಬಿ. ಮರಿಗೌಡರ, ಮಹಾದೇವಪ್ಪ ಮೆಣಸಿನಕಾಯಿ, ಅಡಿವೆಪ್ಪ ಮೆಣಸಿನಕಾಯಿ, ಗುರುಸಿದ್ದಪ್ಪ ಬೆಂಗೇರಿ, ಬಸವರಾಜ ಹೆಬ್ಬಳ್ಳಿ, ಶಿವಾಜಿ ಕನ್ನಿಕೊಪ್ಪ. ಇತರರಿದ್ದರು.