ಜಿಲ್ಲೆ

ದೇವರಾಜ್ ಅರಸು ಜಯಂತ್ಯುತ್ಸವ, ಪ್ರಶಸ್ತಿ ನೀಡುವುದನ್ನು ಕೈಬಿಡಬೇಡಿ



ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹಿಂದುಳಿದ ವರ್ಗಗಳ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ೧೦೮ನೇ ಜಯಂತ್ಯುತ್ಸವ ೨೦ರಂದು ನಡೆಯಲಿದ್ದು, ಹಿಂದಿನ ಎಲ್ಲ ಸರ್ಕಾರಗಳು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಾ ಬಂದಿವೆ. ಆದರೆ ಈ ಬಾರಿಯೂ ಸಿಎಂ ಸಿದ್ದರಾಮಯ್ಯನವರು ಅರಸು ಪ್ರಶಸ್ತಿ ನೀಡುವುದನ್ನು ಕೈಬಿಡಬಾರದು ಎಂದು ಹಿಂದುಳಿದ ವರ್ಗಗಳ ಮುಖಂಡ, ಡಿ.ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತ ಶರಣಪ್ಪ ತಳವಾರ್ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೩-೨೪ನೇ ಸಾಲಿನ ಅರಸು ಪ್ರಶಸ್ತಿ ಕೈಬಿಟ್ಟಿರುವುದು ಹಿಂದುಳಿದ ವರ್ಗಗಳಿಗೆ ಅಪಾರ ನೋವುಂಟು ಮಾಡಿದೆ. ಇದರಿಂದ ಹಿಂದುಳಿದ ವರ್ಗಕ್ಕೆ ಶ್ರಮಿಸಿದ ನಾಯಕರಿಗೆ ಅವಮಾನ ಮಾಡಿದಂತಾಗಿದೆ. ನಿರ್ಧಾರ ವಾಪಸ್ ಪಡೆದು ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಡಿ.ದೇವರಾಜ ಅರಸು ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡ ಅಹಿಂದ ವರ್ಗದ ನಾಯಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಅರಸು ಜನ್ಮದಿನವನ್ನು ಹಿಂದುಳಿದ ವರ್ಗದವರ ಸ್ವಾಭಿಮಾನದ ದಿನವೆಂದೇ ಭಾವಿಸಬೇಕಾಗುತ್ತದೆ. ಭೂಸುಧಾರಣೆ ಕಾಯ್ದೆ, ಶೈP್ಷÀಣಿಕ ಮಟ್ಟ ಸುಧಾರಣೆ, ವಿದ್ಯಾರ್ಥಿಗಳ ವಸತಿ ನಿಲಯಗಳು, ಶಿಷ್ಯವೇತನ, ರಾಜಕೀಯ ಪ್ರಾತಿನಿಧ್ಯ, ಆರ್ಥಿಕ ಸಬಲೀಕರಣ ಹೀಗೆ ಹತ್ತು ಹಲವು ಕಾರ್ಯಕ್ರಮ ರೂಪಿಸಿ ಹಿಂದುಳಿದ ವರ್ಗಗಳ ಕಣ್ಣೀರು ಒರೆಸಿದ ಮಹಾನ್ ನಾಯಕರಾಗಿರುವ ಅರಸು ತತ್ವ ಸಿz್ದÁಂತ ಇಂದಿನ ಪೀಳಿಗೆಗೆ ಮಾದರಿ ಎಂದರು.
ಕೋಲಿ ಸಮಾಜದ ಮುಖಂಡರಾದ ಅಮೃತ ಡಿಗ್ಗಿ, ಚಿಂಚೋಳಿಯ ಸುರೇಶ ಹುಡುಗಿ, ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಅಧ್ಯP್ಷÀ ಬಸವರಾಜ ಮದ್ರಿಕಿ, ಉಪ್ಪಾರ ಸಮಾಜದ ರಾಜ್ಯ ಕಾರ್ಯಾಧ್ಯP್ಷÀ ವೆಂಕಟೇಶ ನೀರಡಗಿ, ಸವಿತಾ ಸಮಾಜದ ಆನಂದ ವಾರಿಕ್, ಸುರೇಶ ವೈದ್ಯರಾಜ್ ಇದ್ದರು.