ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಮಠದಮನೆಯಲ್ಲಿ ಲೋಕಕಲ್ಯಾರ್ಥವಾಗಿ ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷ ಶ್ರೀರೇಣುಕ ಶಿವಾಚಾರ್ಯರು, ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯರು ಹಾಗೂ ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 
ಜಿಲ್ಲೆ

ದೇವರಲ್ಲಿ ಶ್ರದ್ಧೆ ನಂಬಿಕೆ ಅತ್ಯಗತ್ಯ

ಚಿಕ್ಕಮಗಳೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶಸ್ತç ಮತ್ತು ಶಾಸ್ತçದ ಭಯ ಅಗತ್ಯ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅಜ್ಜಂಪುರ ಸಮೀಪದ ಬಗ್ಗವಳ್ಳಿ ಗ್ರಾಮದ ಮಠದಮನೆಯಲ್ಲಿ ಲೋಕಕಲ್ಯಾರ್ಥವಾಗಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ವೀರಶೈವ ಸಂಸ್ಕೃತಿಯಲ್ಲಿ ಇಷ್ಟಲಿಂಗ ಪೂಜೆಗೆ ಮಹತ್ವ ನೀಡಲಾಗಿದೆ. ಇಷ್ಟಲಿಂಗ ಪೂಜೆಯಿಂದ ಭಕ್ತಿಭಾವದ ಸದುz್ದೆÃಶದ ಸಂಕಲ್ಪ ಸಾಕಾರಗೊಳ್ಳುತ್ತದೆ. ಏಕಾಂತವಾಗಿದ್ದ ಇಷ್ಟಲಿಂಗ ಪೂಜೆಯನ್ನು ಲೋಕಾಂತಗೊಳಿಸಲಾಗಿದೆ. ಆಸ್ತಿಕ ಮಹಾಶಯರೆಲ್ಲರೂ ಪೂಜೆಯಲ್ಲಿ ಪಾಲ್ಗೊಂಡು ಸಂತೋಷಪಡುವ ಅವಕಾಶ ಕಲ್ಪಿಸಿರುವುದು ಹರ್ಷದ ಸಂಗತಿ ಎಂದರು.

ದೇವರಲ್ಲಿ ಶ್ರದ್ಧೆ ನಂಬಿಕೆ ಅತ್ಯಗತ್ಯ. ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಮನುಕುಲದ ಉದ್ಧಾರಕ್ಕಾಗಿ ದಶಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ಅವುಗಳನ್ನು ನಿಜವಾಗಿ ಪಾಲಿಸಿz್ದÉÃ ಆದರೆ ಶಾಂತಿ-ನೆಮ್ಮದಿಯ ಬದುಕು ನಮ್ಮೆಲ್ಲರದ್ದಾಗುತ್ತದೆ. ಶಾಸ್ತç ಭಯದ ಮರ್ಯಾದೆ ಮೀರಿ ನಡೆದಾಗ ಶಸ್ತçದ ಭಯ ಇರುತ್ತದೆ ಎಂದು ಹೇಳಿದರು.

ಜೀವನ ಜಂಜಾಟದಲ್ಲಿ ಸಿಲುಕಿದ ಮನುಷ್ಯನಿಗೆ ಪೂಜಾದಿ ಧಾರ್ಮಿಕ ಕಾರ್ಯಗಳಲ್ಲಿ ಸ್ಫೂರ್ತಿ ನೆಮ್ಮದಿ ಇದೆ. ಸಮೃದ್ಧ ಮತ್ತು ಶಾಂತಿಯ ನಾಡನ್ನು ಕಟ್ಟುವುದೇ ಧರ್ಮದ ಧ್ಯೇಯ. ವ್ಯಕ್ತಿತ್ವ ವಿಕಾಸವೇ ಗುರಿ. ಹೆತ್ತತಾಯಿ, ಹೊತ್ತ ಭೂಮಿ ಎಷ್ಟು ಮುಖ್ಯವೋ ಧರ್ಮವೂ ಅಷ್ಟೇ ಮುಖ್ಯ. ವಿವೇಕದ ತುತ್ತ ತುದಿಯೆ ದೈವ ಸಾಕ್ಷಾತ್ಕಾರ. ಧರ್ಮದಲ್ಲಿ ಮಾರ್ಗವಿದೆ ಆದರೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಆದರೆ ಮಾರ್ಗವಿಲ್ಲ. ಧರ್ಮ ಮತ್ತು ವಿಜ್ಞಾನ ಸಮನ್ವಯತೆಯಿಂದ ಸಾಗಿದರೆ ಮಾನವನ ಬದುಕಿಗೆ ಶ್ರೇಯಸ್ಸು ಇದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಆಯೋಜಕರಾದ ವಿಶ್ರಾಂತ ಶಿಕ್ಷಕ ಬಿ.ಪಿ.ಲಿಂಗಮೂರ್ತಿ ಮಾತನಾಡಿ, ಪ್ರಾಚೀನ ಇತಿಹಾಸ ಹೊಂದಿರುವ ಬಗ್ಗವಳ್ಳಿ ಗ್ರಾಮಕ್ಕೆ ರಂಭಾಪುರಿ ಪೀಠದ ಜಗದ್ಗುರುಗಳು ಎರಡನೇ ಬಾರಿ ಆಗಮಿಸಿರುವುದು ಸಂತೋಷದ ಸಂಗತಿ. ಗ್ರಾಮಸ್ಥರಿಗೆ ದರ್ಶನಾಶೀರ್ವಾದದ ಜೊತೆಗೆ ಇಷ್ಟಲಿಂಗಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಂಗಮ ಸಮಾಜದ ಮುಖ್ಯಸ್ಥ ಬಿ.ಪಿ.ಶಿವಮೂರ್ತಿ ಮಾತನಾಡಿ, ಪಂಚಪೀಠಗಳಲ್ಲಿ ಪ್ರಥಮ ಪೀಠವಾಗಿ ಶ್ರೀಮದ್ರಂಭಾಪುರಿ ವೀರಸಿಂಹಾಸನ ಮಹಾಪೀಠವು ಜನರ ಬಳಿಗೆ ಬಂದು ನಿಜ ಧರ್ಮದ ಬೋಧನೆ ಮಾಡುತ್ತಿದೆ. ಆದಿಜಗದ್ಗುರು ಶ್ರೀ ರೇಣುಕಾಚಾರ್ಯರು ಅಗಸ್ತö್ಯ ಮಹಾಮುನಿಗಳನ್ನು ನಿಮಿತ್ತಮಾಡಿಕೊಂಡು ಮಾನವಸಂಕುಲಕ್ಕೆ ಉಪಯುಕ್ತವಾದ ಸತ್ಯ, ಜಪ, ತಪ, ಪೂಜೆ, ಧ್ಯಾನ, ಕ್ಷಮೆ, ದಯೆ, ದಾನ, ಅಸ್ತೇಯ, ಬ್ರಹ್ಮಚರ್ಯದಂಥ ಹತ್ತು ವಿಧದ ಸಂಹಿತೆಯನ್ನು ನೀಡಿ ಉಪಕರಿಸಿದ್ದಾರೆ ಎಂದು ಸ್ಮರಿಸಿದರು.

ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳ ಅನುಸಂಧಾನದ ಮೂಲಕ ಮಾಡುವ ಗುರು-ಜಂಗಮಗಳ ಅರ್ಚನೆಯೆ ಪೂಜೆ ಎನಿಸುತ್ತದೆ. ಚಂಚಲವಾದ ಮನಸ್ಸನ್ನು ಏಕಾಗ್ರಗೊಳಿಸುವ ಸಲುವಾಗಿ ನಾನಾ ಬಗೆಯ ಉಪಚಾರಗಳಿಂದ ಮಾಡುವ ಇಷ್ಟಲಿಂಗಪೂಜೆಯು ಆಸ್ತಿಕರಲ್ಲಿ ಸಂತೋಷವನ್ನುAಟು ಮಾಡುತ್ತದೆ ಎಂದರು.

ಪ್ರತಿ ಧರ್ಮವೂ ನೈತಿಕ ವಿಚಾರ, ಸಾಂಪ್ರದಾಯಕ ವಿಚಾರ ಮತ್ತು ದಾರ್ಶನಿಕ ವಿಚಾರಗಳನ್ನು ಒಳಗೊಂಡಿರುತ್ತವೆ. ಎಲ್ಲ ಧರ್ಮದಲ್ಲೂ ನೈತಿಕ ವಿಚಾರಗಳು ಒಂದೇ ಆಗಿರುತ್ತದೆ. ದಾರ್ಶನಿಕ ವಿಚಾರದಲ್ಲಿ ವಿಭಿನ್ನತೆ ಇದ್ದು, ಸಾಂಪ್ರದಾಯಕ ವಿಚಾರಗಳು ಬೇರೆ ಬೇರೆ ಆಗಿರುತ್ತವೆ. ಅಷ್ಟಾವರಣ -ಪಂಚಾಚಾರ ಮತ್ತು ಷಟ್‌ಸ್ಥಲಗಳು ವೀರಶೈವ ಧರ್ಮಕ್ಕೆ ಮೂಲಾಧಾರ. ಇವುಗಳ ಕನಿಷ್ಟ ಜ್ಞಾನ ವೀರಶೈವರಿಗೆ ಅತ್ಯಗತ್ಯ ಎಂದು ಹೇಳಿದರು.

ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷ ಶ್ರೀರೇಣುಕ ಶಿವಾಚಾರ್ಯರು, ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯರು ಹಾಗೂ ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಬಗ್ಗವಳ್ಳಿಗೆ ಆಗಮಿಸಿದ ಶ್ರೀಮದ್ರಂಭಾಪುರಿ ಜಗದ್ಗುರುಗಳನ್ನು ತಳಿರುತೋರಣ, ಜಯಘೋಷ, ಪಟಾಕಿಸಿಡಿಸುವುದರ ಮೂಲಕ ಸಂಭ್ರಮದಿAದ ಬರಮಾಡಿಕೊಳ್ಳಲಾಯಿತು. ಕುಂಭಹೊತ್ತ ಮಹಿಳೆಯರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಸಮುದಾಯಭವನದಲ್ಲಿ ಸ್ವಾಗತ ಧರ್ಮ ಸಮಾರಂಭ ನಡೆಯಿತು.

ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಅಜ್ಜಂಪುರ ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಗಂಗಾಧರಯ್ಯ ಮತ್ತು ಬಗ್ಗವಳ್ಳಿಯ ಬಡಗನಾಡು ಹೇಮರಡ್ಡಿö್ಡ ಮಲ್ಲಮ್ಮ ವೀರಶೈವ ಜನಾಂಗ ಸಂಘದ ಅಧ್ಯಕ್ಷ ಹೇಮಂತ ಕುಮಾರ್, ಜಂಗಮ ಬಳಗ ಸಂಚಾಲಕ ಪ್ರಭುಲಿಂಗ ಶಾಸ್ತಿç , ಗ್ರಾಪಂ ಸದಸ್ಯ ಗುರುಪಾದಪ್ಪ, ಗ್ರಾಮದ ಮುಖಂಡರಾದ ಮರುಳಸಿದ್ದಪ್ಪ, ಮರುಳಪ್ಪ, ಗೊಂಡೇದಹಳ್ಳಿ ಗಿರೀಶ್, ಕಾಟೆಗನೆರೆ ಉಮಾಪತಿ ಆರಾಧ್ಯ, ಅಮೃತಾಪುರದ ಪ್ರಭು, ಬಿ.ಎಸ್.ಚಂದ್ರಶೇಖರಪ್ಪ, ಉಪನ್ಯಾಸಕರಾದ ಯಶವಂತಕುಮಾರ ಮತ್ತು ಕಿರಣಕುಮಾರ್ ಉಪಸ್ಥಿತರಿದ್ದರು.