ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕು ದೇವರಪುರ ಗ್ರಾಮದ ದೇವರ ಕಾಡು ಪೈಸಾರಿಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರು 11 ಲಕ್ಷ ರೂ.ವೆಚ್ಚದ ನೂತನ ರಸ್ತೆಯನ್ನು ಶನಿವಾರ ಉದ್ಘಾಟಿಸಿದರು.
ಈ ಭಾಗದ ಜನರ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಹಾಡಿಗಳಲ್ಲಿ ಹಾಗೂ ಕಾಡಂಚಿನಲ್ಲಿ ವಾಸಿಸುವ ಜನರಿಗೆ ಉತ್ತಮ ರಸ್ತೆ ಕಲ್ಪಿಸಿ ಕೊಡುವುದರೊಂದಿಗೆ, ಅವರ ಸುರಕ್ಷತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ದೇವರಪುರ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಸಂತ್, ತಿತಿಮತಿ ವಲಯ ಅಧ್ಯಕ್ಷ ನವೀನ್, ಕಾಂಗ್ರೆಸ್ ಮುಖಂಡರಾದ ಬೆನ್ನಿ, ಎ.ಜೆ.ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಂಕಜಾ, ಡಿಸಿಸಿ ಸದಸ್ಯರಾದ ಮುಕಟ್ಟೀರ ಸಂದೀಪ್, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಅಲೀರ ರಶೀದ್, ಚೆರಂಡ ಮೋಹನ್ ಮತ್ತು ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.