ನೆಲಮಂಗಲ: ದೇವರಲ್ಲಿ ನಂಬಿಕೆ ಇಟ್ಟವರಿಗೆ ಎಂದೂ ಮೋಸವಾಗುವುದಿಲ್ಲ. ಪ್ರತಿಯೊಬ್ಬರು ದೇವರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಹಿರಿಯರು
ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ನಗರದ ಸುಭಾಷ್‌ನಗರದ ಗೋವಿಂದಪ್ಪ ಬಡಾವಣೆಯಲ್ಲಿ ಸುಭಾಷ್‌ನಗರ ಗೆಳೆಯ ಬಳಗ ಸೇವಾ ಟ್ರಸ್ಟ್‌ದಿಂದ ಭಾನುವಾರ 6ನೇ ವರ್ಷದ ಶ್ರೀಅಣ್ಣಮ್ಮ ದೇವಿ ಪ್ರತಿಷ್ಠಾನ ಹಾಗೂ ಮೆರವಣಿಗೆ ನಡೆಯಿತು. ಬೆಂಗಳೂರ ನಗರ ಶಕ್ತಿ ದೇವತೆ ಶ್ರೀ ಅಣ್ಣಮ್ಮ ದೇವಿ ತಾಲೂಕಿನ ಜನತೆಗೆ ಸುಖ ಶಾಂತಿ, ನೆಮ್ಮದಿ ಮತ್ತು ಆರೋಗ್ಯವನ್ನು ಕರುಣಿಸಲಿ ಎಂದರು.
ಸುಭಾಷ್‌ನಗರ ಗೆಳೆಯ ಬಳಗ ಸೇವಾ ಟ್ರಸ್ಟ್ ದಿಂದ ಶುಕ್ರವಾರ ಸಂಜೆ ಪ್ರತಿಷ್ಠಾನ ಮಾಡಲಾಗಿದ್ದು, ಶನಿವಾರ ದೀಪೋತ್ಸವ, ಭಾನುವಾರ ಅಣ್ಣಮ್ಮ ದೇವಿಯನ್ನು ಬೆಳ್ಳಿರಥದಲ್ಲಿ ಬಡಾವಣೆ ಹಾಗೂ ನಗರದ ಮುಖ್ಯರಸ್ತೆಯಲ್ಲಿ ಜಾನಪದ ಕಲಾ ತಂಡದೊಂದಿಗೆ ಮೆರವಣಿಗೆ ಮಾಡಲಾಯಿತು. ನಗರಸಭೆ ಸದಸ್ಯ ಸಿ.ಪ್ರದೀಪ್, ಲೋಲಾಕ್ಷಿಗಂಗಾಧರ್, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಟಿ.ನಾಗರಾಜು, ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು, ವಕೀಲ ರಘುನಾಥ್, ಬಳಗ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಅನಿಲ್‌ರೆಡ್ಡಿ, ಚೇತನ್, ಅಧ್ಯಕ್ಷ ಸಾಗರ್, ಸದಸ್ಯ ಹರ್ಷ, ವೈ.ಟಿ.ಚಂದನ್, ಸೂರಜ್‌ಚಂದ್ರ, ಶರತ್‌ಚಂದ್ರ, ಅಭಿಲಾಷ್‌ಗೌಡ, ಸಂತೋಷ್, ಕರ್ಣ, ತೇಜಸ್, ಗೌತಮ್ ಉಪಸ್ಥಿತರಿದ್ದರು.