ಹುಬ್ಬಳ್ಳಿ: ಶ್ರೀ ಸದ್ಗುರು ಸಮರ್ಥ ಭೀಮಾನಂದ ಮಹಾರಾಜರರು ನಡೆದಾಡುವ ದೇವರಾಗಿದ್ದರು. ಅವರ ಸ್ಮರಣೆ ಮಾಡುವ ಮೂಲಕ ನಾವೂ ಮತ್ತಷ್ಟು ಪುನೀತರಾಗುತ್ತಿದ್ದೇವೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದಲ್ಲಿ ಶ್ರೀ ಸದ್ಗುರು ಸಮರ್ಥ ಭೀಮಾನಂದ ಮಹಾರಾಜರ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ಸರ್ವಧರ್ಮ ಸಮನ್ವಯ ಆಧ್ಯಾತ್ಮಿಕ ಜ್ಞಾನ ಯಜ್ಞ ಸಪ್ತಾಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿಗಳಿಗಿಂತ ಹೆಚ್ಚು ದೇವರನ್ನು ನಂಬಿ ಬದುಕುತ್ತಿರುವ ದೇಶ ನಮ್ಮದು. ಈ ಸಮಾಜದ ಜೊತೆ ಇದ್ದು, ಎಲ್ಲ ರೀತಿಯಿಂದಲೂ ಸಹಕಾರ ನೀಡುವುದಾಗಿ ಹೇಳಿದರು.
ಶ್ರೀ ಸದ್ಗುರು ಸಮರ್ಥ ಪ್ರಕಾಶ ಮಹಾರಾಜರು, ಬಾಳು ಮಹಾರಾಜ, ಹನಮಂತಣ್ಣ ಕೊಣ್ಣೂರ, ಅಶೋಕ ಕಾಡಕೊಪ್ಪ, ಗಿರೀಶ ಕಾಡಕೊಪ್ಪ, ಅಶೋಕ ಮಂಡಿನಾಳ, ಸುರೇಶ ಹೂಗಾರ, ಕಲ್ಲಪ್ಪ ಉಳ್ಳಾಗಡ್ಡಿ, ಮಂಜು ಗಣಿ, ಮುತ್ತು ಗಾಳಪ್ಪನವರ, ಮಹಾಂತೇಶ ಹೂಗಾರ, ಮುತ್ತು ಚಾಕಲಬ್ಬಿ, ಪ್ರವೀಣ ಜವಳಿ, ಸಿದ್ಧನಗೌಡ ಹಿರೇಗೌಡರ, ಪ್ರಭು ಲಕ್ಕುಂಡಿಮಠ, ಮೌನಪ್ಪ ಕಂಬಳಿ, ಆಕಾಶ ಹಿರೇಮಠ, ಇತರರು ಇದ್ದರು.