ಕಡೂರು ತಾಪಂನಲ್ಲಿ ನಡೆದ ದೇವರದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿದರು. ಸಿ.ಎಸ್.ಪೂರ್ಣಿಮಾ, ಎಚ್.ಎಲ್.ರಂಗನಾಥ್, ಶೇಖರಪ್ಪ, ಅರೇಕಲ್ ಪ್ರಕಾಶ್, ಸಿಂಗಟಗೆರೆ ಸಿದ್ದಪ್ಪ, ಕುಮಾರಸ್ವಾಮಿ ಇತರರಿದ್ದರು.  
ಜಿಲ್ಲೆ

ದೇವರ ದಾಸಿಮಯ್ಯ ಜೀವನಕ್ಕೆ ಸ್ಫೂರ್ತಿ

ಕಡೂರು: ಮನುಕುಲಕ್ಕೆ ಸನ್ಮಾರ್ಗವನ್ನು ವಚನಗಳ ಮೂಲಕ ತೋರಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಎಂದು ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಬಣ್ಣಿಸಿದರು.

ತಾಪಂನಲ್ಲಿ ತಾಲೂಕು ಆಡಳಿತ ಹಾಗೂ ದೇವಾಂಗ ಸಮಾಜದಿಂದ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಮಾತನಾಡಿ, ವಚನಗಳನ್ನು ಆಲಿಸುವುದರಿಂದ ಜೀವನಕ್ಕೆ ಸ್ಫೂರ್ತಿ ಸಿಗುತ್ತದೆ. ಜೀವನ ಸಾರ್ಥಕ ಮಾಡಿಕೊಳ್ಳಲು ಶರಣರ ವಚನ ಪಾಲಿಸಬೇಕು ಎಂದರು.

ತಾಲೂಕಿನಾದ್ಯಂತ ಇರುವ ದೇವಾಂಗ ಸಮಾಜ ಎಲ್ಲ ಸಮುದಾಯಗಳೊಂದಿಗೆ ಬೆರೆತು ಜೀವನ ಸಾಗಿಸುತ್ತಿದೆ. ಪಟ್ಟಣ ವ್ಯಾಪ್ತಿಯ ಸಮಾಜದ ಅಭಿವೃದ್ಧಿಗೆ ನನ್ನ ಇತಿಮಿತಿಯಲ್ಲಿ ಬೆಂಬಲ ನಿರಂತವಾಗಿರಲಿದೆ ಎಂದರು.

ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಎಚ್.ಎಲ್.ರಂಗನಾಥ್ ಮಾತನಾಡಿ, ದೇವಾಂಗ ಸಮಾಜ ನೇಕಾರಿಕೆ ಮಾಡಿಕೊಂಡು ಬಂದಿದೆ. ಆದರೆ ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಕುಲಕಸುಬಿಗೆ ಬೇಡಿಕೆ ಇಲ್ಲದಂತಾಗಿದೆ. ತಾಲೂಕಿನಾದ್ಯಂತ ಸಮಾಜವನ್ನು ಹಿರಿಯರ ಮಾರ್ಗದರ್ಶನದಲ್ಲಿ ಸಂಘಟಿಸಲಾಗುತ್ತಿದೆ ಎಂದರು.

ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಎಚ್.ಎಲ್.ಶೇಖರಪ್ಪ, ನೇಕಾರರ ಒಕ್ಕೂಟದ ಅಧ್ಯಕ್ಷ ಕರುಗಲ್‌ಹಟ್ಟಿ ಕುಮಾರಸ್ವಾಮಿ, ಅರೇಕಲ್ ಪ್ರಕಾಶ್, ಹರೀಶ್, ಕೆ.ಎಂ.ಅಕ್ಷಯ್, ಸಿಂಗಟಗೆರೆ ಸಿದ್ದಪ್ಪ, ಪಿ.ಟಿ.ವೆಂಕಟೇಶ್, ಮಲ್ಲಿಕಾರ್ಜುನ್, ವಿನೋದ್‌ಕುಮಾರ್, ಪ್ರಶಾಂತ್, ಉಪನ್ಯಾಸಕ ಮಂಜುನಾಥ್ ಇತರರಿದ್ದರು.