ಜಿಲ್ಲೆ

ದೇವದುರ್ಗದಲ್ಲಿ ಮಂಡಲ ಪೂಜೆ

ದೇವದುರ್ಗ: ಪಟ್ಟಣದ ಶ್ರೀ ಮಣಿಕಂಠ ಆಶ್ರಮದಲ್ಲಿ 26ನೇ ವರ್ಷದ ಮಹಾಮಂಡಲ ಪೂಜೆ ಗುರುವಾರ ಭಕ್ತಿಯಿಂದ ಜರುಗಿತು. ನೂರಾರು ಮಣಿಕಂಠ ಮಾಲಾಧಾರಿ ಸ್ವಾಮಿಗಳು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.

ಗುರುಸ್ವಾಮಿಗಳಾದ ಸೊಲ್ಲಾಪುರದ ಮಲ್ಲಿಕಾರ್ಜುನ, ಮನೋಹರ್ ಮಕ್ತಲ್ ಹಾಗೂ ರವೀಂದ್ರ ದೇಸಾಯಿ ನೇತೃತ್ವದಲ್ಲಿ ಬೆಳಗ್ಗೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು. ಅಯ್ಯಪ್ಪಸ್ವಾಮಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಅಷ್ಟೋತ್ತರ ಪೂಜೆ ನೆರವೇರಿದವು. ನಂತರ ಅಯ್ಯಪ್ಪಸ್ವಾಮಿ ಮೂರ್ತಿ ಪಲ್ಲಕ್ಕಿ ಮೆರವಣಿಗೆ ಜರುಗಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಮಾಲಾಧಾರಿಗಳಾದ ಮೌನೇಶ, ರವಿಕುಮಾರ, ನಾಗರಾಜ ಕಾಲಿಗಾರ, ಶಂಕ್ರಯ್ಯಸ್ವಾಮಿ, ನಾಗಪ್ಪ, ಆದೆಪ್ಪ, ಬಸವರಾಜ ಇತರರಿದ್ದರು.