ಜಿಲ್ಲೆ

ದೇವತಾರಾಧನೆ ಶಕ್ತಿಯ ಸಂಕೇತ

ಕಿಕ್ಕೇರಿ: ನಿರ್ವಿಘ್ನವಾಗಿ ಎಲ್ಲ ಕಾರ್ಯ ನಡೆಯಲು ಭಗವಂತನ ಆರಾಧನೆ, ಬಳಸುವ ವಸ್ತುಗಳನ್ನು ಪೂಜಿಸಲು ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.


ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಆಯುಧಪೂಜೆ, ಹೋಮ ಹವನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಸಿಬ್ಬಂದಿ ಸಂಸ್ಥೆಯ ಕುಟುಂಬದ ಸದಸ್ಯರಂತೆ. ಇವರ ಕ್ಷೇಮ, ಆರೋಗ್ಯಕ್ಕೆ ಶರನ್ನವರಾತ್ರಿಯಲ್ಲಿ ದುರ್ಗೆಯ ಪೂಜೆ, ಹೋಮ-ಹವನಾದಿ ಮಾಡಲಾಗುತ್ತಿದೆ. ಸಾಮಾಜಿಕ ಕ್ಷೇತ್ರದಲ್ಲಿ ಅಬಲೆಯರು, ದುರ್ಬಲರ ಮುಖ್ಯವಾಹಿನಿಗೆ ತರಲು ವಿವಿಧ ಯೋಜನೆಗಳನ್ನು ಸಂಸ್ಥೆ ಹಮ್ಮಿಕೊಳ್ಳಲಾಗಿದ್ದು, ಎಲ್ಲವೂ ನಿರ್ವಿಘ್ನವಾಗಿ ನಡೆಯಲಿ ಎಂದು ದೇವಿಯನ್ನು ಪ್ರಾರ್ಥಿಸಲಾಗುತ್ತಿದೆ ಎಂದರು.


ತಾಲೂಕು ಯೋಜನಾಧಿಕಾರಿ ಎಂ. ವೀರೇಶಪ್ಪ ಆಯುಧಪೂಜೆ, ಶರನ್ನವರಾತ್ರಿ ಮಾಹಿತಿ ನೀಡಿದರು. ಸಂಸ್ಥೆಯ ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಲಾಯಿತು. ಗಣಪತಿ, ದುರ್ಗೆ ಹೋಮ ಮತ್ತಿತರ ಹೋಮಗಳು ನಡೆದು ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.


ತಾ. ಯೋಜನಾಧಿಕಾರಿ ಎಂ. ವೀರೇಶಪ್ಪ, ಮ್ಯಾನೇಜರ್ ಶಶಿಪ್ರಭಾ, ಮೇಲ್ವಿಚಾರಕರಾದ ಎಚ್.ಎಸ್. ಗುಣಶ್ರೀ, ಕಾಂತಿಕಾಮಣಿ, ರೇಣುಕಾ, ಮಾದಲಾಂಬಿಕಾ, ಯಶೋದಾ, ಸೌಮ್ಯಾ, ವಿನಯಕುಮಾರ್, ಪ್ರವೀಣ್, ಚೇತನ್, ಮದುಸೂದನ್, ಅಜಯ್, ರವಿಕುಮಾರ್, ಸೇವಾ ಪ್ರತಿನಿಧಿ, ಜ್ಞಾನವಿಕಾಸ ಯೋಜನೆ ಪ್ರತಿನಿಧಿಗಳು ಇತರರಿದ್ದರು.