ಚಾಮರಾಜನಗರ: ದೇಮಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಈ ಸಾಲಿನಲ್ಲಿ 2.11 ಲಕ್ಷ ರೂ, ಲಾಭವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಶಿವನಾಗಪ್ಪ ಹೇಳಿದರು.
ತಾಲೂಕಿನ ದೇಮಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ 2024-25 ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಾಲಿನಲ್ಲಿ ಸಹಕಾರ ಸಂಘವು 2.11 ಲಕ್ಷ ರೂ, ಲಾಭಗಳಿಸಿದ್ದು, ರೈತರಿಗೆ 1.46 ಕೋಟಿ ರೂ, ಹಣವನ್ನು ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲಾಗಿದೆ. ರೈತರು ಸಕಾಲದಲ್ಲಿ ಮರುಪಾವತಿ ಮಾಡಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮಹಿಳೆಯರಿಗೆ ಗುಡಿ ಕೈಗಾರಿಕೆ ಸೇರಿದಂತೆ ಅನೇಕ ಸೌಲಭ್ಯ ಒದಗಿಸಿಕೊಡಲು ಬದ್ಧನಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ರಾಜಮ್ಮ, ಸದಸ್ಯರುಗಳಾದ ಎನ್.ಸಿದ್ದಪ್ಪ. ಎಸ್.ನಟರಾಜು, ಬಿ.ರಾಜೇಂದ್ರ ಸ್ವಾಮಿ, ಡಿ.ಆರ್.ಗುರುಪಾದಸ್ವಾಮಿ, ಮರಿಸಿದ್ದಯ್ಯ, ರಾಜೇಶ್, ಡಿ.ಎಸ್.ಶ್ರೀಕಂಠಸ್ವಾಮಿ, ಗೌರಮ್ಮ, ರೇಣುಕಮ್ಮ, ಮೇಲ್ವಿಚಾರಕ ಕೆ.ಲಿಂಗರಾಜು, ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಲ್.ರಾಜಣ್ಣ, ಸಹಾಯಕ ಪಿ.ಪ್ರವೀಣ್, ಮುಖಂಡ ಮಾದಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಎನ್.ಶಿವಮಲ್ಲಪ್ಪ, ಪಿ.ಮಲ್ಲೇಶಪ್ಪ, ಎಂ.ಶಂಕರಪ್ಪ, ಸೌಹಾರ್ದ ಸಂಘದ ಮಹಾದೇವಸ್ವಾಮಿ, ಅಂಕನಶೆಟ್ಟಿ ಮೋಳೆ, ಹೆಬಚಹಳ್ಳಿ, ದೇಮಹಳ್ಳಿಮೋಳೆ ಗ್ರಾಮಸ್ಥರು ಹಾಜರಿದ್ದರು.