ಜಿಲ್ಲೆ

ದೇಗುಲಗಳಿಂದ ಗಟ್ಟಿಯಾಗಿ ಬೇರೂರುತ್ತದೆ ಸಂಸ್ಕಾರ

ಕೆ.ಎಂ.ದೊಡ್ಡಿ: ಅಣ್ಣೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಹಿತ್ತಲುಮಾರಮ್ಮ(ಮದ್ದೂರಮ್ಮ) ದೇವಾಲಯಕ್ಕೆ ಶನಿವಾರ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಆರ್ಥಿಕ ನೆರವು ನೀಡಲಾಯಿತು.
ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಕದಲೂರು ಉದಯ್ ಮಾತನಾಡಿ, ದೇವಸ್ಥಾನಗಳಿಂದ ಧರ್ಮ ಉಳಿಯುವುದಲ್ಲದೆ, ಸಂಸ್ಕಾರಗಳು ಗಟ್ಟಿಯಾಗಿ ಬೇರೂರುತ್ತವೆ. ಗ್ರಾಮದಲ್ಲಿ ಶಾಂತಿ ನೆಲೆಸಲಿದ್ದು, ಸೌಹಾರ್ದತೆಯೂ ವೃದ್ಧಿಗೊಳ್ಳಲಿದೆ ಎಂದು ತಿಳಿಸಿದರು.


ಮದ್ದೂರು ತಾಲೂಕಿನ ಹಲವು ಗ್ರಾಮಗಳಲ್ಲಿ ದೇವಾಲಯಗಳು ಯಾವುದೇ ಅಭಿವೃದ್ಧಿಯನ್ನೂ ಕಂಡಿಲ್ಲ. ಹಾಗಾಗಿ ದೇವತಾ ಕಾರ್ಯಗಳನ್ನು ಮಾಡುವ ಪುಣ್ಯ ನನ್ನ ಪಾಲಿಗೆ ಸಿಕ್ಕಿರುವುದು ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.


ಗ್ರಾಮಸ್ಥರ ಮನವಿ ಮೇರೆಗೆ ದೇವಾಲಯ ನಿರ್ಮಾಣಕ್ಕೆ ಹಣ ಸಹಾಯ ಮಾಡುತ್ತಿದ್ದೇನೆ ಹೊರತು ಯಾವುದೇ ದುರುದ್ದೇಶಗಳಿಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ಗ್ರಾಮಸ್ಥರು ಕದಲೂರು ಉದಯ್ ಅವರನ್ನು ಅಭಿನಂದಿಸಿದರು.


ಗ್ರಾಮ ಪಂಚಾಯಿತಿ ಸದಸ್ಯ ಕದಲೂರು ತಿಮ್ಮೇಗೌಡ, ಮುಖಂಡರಾದ ಚಾಟಿ ಸಿದ್ದೇಗೌಡ, ಮನೋಹರ್, ಚಿನ್ನಸ್ವಾಮಿ, ರಾಜಣ್ಣ, ಚಿಕ್ಕಸಿದ್ದಯ್ಯ, ಕೃಷ್ಣ, ಪುಟ್ಟಯ್ಯ ಇತರರು ಇದ್ದರು.