ಕೊಳ್ಳೇಗಾಲ: ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಸವಿತಾ ಸಮಾಜದ ಅಭಯ ಆಂಜನೇಯಸ್ವಾಮಿ ಟ್ರಸ್ಟ್ ವತಿಯಿಂದ ನಿರ್ಮಾಣವಾಗುತ್ತಿರುವ ಅಭಯ ಶ್ರೀ ಆಂಜನೇಯಸ್ವಾಮಿ ನೂತನ ದೇವಸ್ಥಾನ ಕಟ್ಟಡ ಕಾಮಗಾರಿಗೆ ಶಾಸಕ ಎನ್.ಮಹೇಶ್ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಸವಿತಾ ಸಮಾಜದ ಬಂಧುಗಳು ವೃತ್ತಿಯನ್ನು ನಂಬಿ ಬದುಕುವ ಜನರಾಗಿದ್ದಾರೆ. ಈ ಸಮಾಜದ ಜನರು ಕಡಿಮೆ ಸಂಖ್ಯೆಯಲ್ಲಿದ್ದರು ನಮ್ಮ ಭಾಗದಲ್ಲಿ ಅಭಯ ಶ್ರೀ ಆಂಜನೇಯ ಸ್ವಾಮಿ ದೇಗುಲ ನಿರ್ಮಾಣ ಮಾಡುವ ದೊಡ್ಡ ಸಂಕಲ್ಪ ಮಾಡಿದ್ದಾರೆ. ಈ ಮಹತ್ಕಾರ್ಯಕ್ಕೆ ನೆರವು ನೀಡುವುದಾಗಿ ತಿಳಿಸಿದರಲ್ಲದೆ, ದಾನಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಚಿತ್ರ ನಿರ್ದೇಶಕ ಚೇತನ್ ಮಾತನಾಡಿ, ಅಭಯ ಆಂಜನೇಯ ಸ್ವಾಮಿ ದೇಗುಲವನ್ನು ಎಲ್ಲರ ಒಳಿತಿಗಾಗಿ ನಿರ್ಮಾಣ ಮಾಡುವ ಸಂಕಲ್ಪ ಮಾಡಿರುವುದು ಶ್ಲಾಘಿಸುವ ವಿಚಾರ. ಪ್ರಸ್ತುತ ನಾನು, ನಮ್ಮದು ಎಂಬ ಮನಸ್ಥಿತಿ ಇರುವ ಸಮಾಜದ ನಡುವೆ ಎಲ್ಲರಿಗೂ ಒಳಿತಾಗಲಿ ಎಂಬ ಉದ್ದೇಶದಿಂದ ಆಂಜನೇಯ ಸ್ವಾಮಿ ದೇಗುಲ ನಿರ್ಮಾಣ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಚಿತ್ರ ನಿರ್ದೇಶಕ ಚೇತನ್, ಪ್ರಥಮ ದರ್ಜೆ ಗುತ್ತಿಗೆದಾರ ಮಹಾದೇವ, ಮುಖಂಡ ಸೋಮಣ್ಣ ಉಪ್ಪಾರ್, ನಾರಾಯಣ ಶೆಟ್ಟಿ ಇತರರು ಇದ್ದರು.