ಎನ್.ಆರ್.ಪುರ: ರಾಜ್ಯದ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರ್ಥಿಕ ಸಹಾಯ ಮಾಡಲಾಗುತ್ತಿದೆ ಎಂದು ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕು ಯೋಜನಾಧಿಕಾರಿ ರಾಜೇಶ್ ತಿಳಿಸಿದರು.
ಕಾನೂರು ಗದ್ದೇಮನೆ ಗುತ್ಯಮ್ಮ ರಂಗನಾಥ ದೇವಸ್ಥಾನಕ್ಕೆ 1.50 ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಿಸಿ ಮಾತನಾಡಿ, ಗುತ್ಯಮ್ಮ ರಂಗನಾಥ ದೇವಸ್ಥಾನದ ಸಮಿತಿ ಪದಾಧಿಕಾರಿಗಳು ಸಹಾಯ ಧನಕ್ಕೆ ಮನವಿ ಮಾಡಿದ್ದರು. ಹಣ ಉಪಯೋಗಿಸಿಕೊಂಡು ದೇವಸ್ಥಾನದ ಜೀರ್ಣೋದ್ಧಾರ ಬೇಗ ನಡೆಸಲಿ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಮರ ವಲಯ ಮೇಲ್ವಿಚಾರಕ ತೀರ್ಥರಾಜ್, ದೇವಸ್ಥಾನ ಸಮಿತಿ ಅಧ್ಯಕ್ಷ ಸಂದೇಶ್, ಮಾಜಿ ಅಧ್ಯಕ್ಷ ಜಿ.ಎಸ್.ರಮೇಶ್, ಸದಸ್ಯರಾದ ರತ್ನಾಕರ ಗೌಡ, ಕುಂಬ್ರಹಳ್ಳಿ ರಮೇಶ್, ಅರ್ಚಕ ಮುರಳಿ ಭಟ್ಟ ಇದ್ದರು.