ಗುರುಮಠಕಲ್ ತಾಲೂಕಿನ ಕಂದಕೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ವಸತಿಗೃಹ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಶನಿವಾರ ಚಾಲನೆ ನೀಡಿದರು. ತಹಸೀಲ್ದಾರ್ ಮಹ್ಮದ್ ಮೋಸಿನ್ ಅಹ್ಮದ್, ಇಸಿಒ ಶರಣಗೌಡ ಇತರರಿದ್ದರು. 
ಜಿಲ್ಲೆ

ದೆಹಲಿ ಮಾದರಿ ಶಿಕ್ಷಣ ಜಾರಿಗೆ ಯತ್ನ

ಗುರುಮಠಕಲ್: ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಜಾರಿಗೆ ತಂದಿರುವ ಶಿಕ್ಷಣ ನೀತಿಯನ್ನು ಕ್ಷೇತ್ರದಲ್ಲಿ ತರುವುದಾಗಿ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಕಂದಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೧೯-೨೦ರ ಕೆಕೆಆರ್‌ಡಿಬಿ ಅಡಿ ೪೯.೨೬ ಲಕ್ಷ ರೂ. ವೆಚ್ಚದ ಶಿಕ್ಷಕರ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿದ ಅವರು, ದೆಹಲಿಯಲ್ಲಿ ಸಿಎಂ ಕೇಜ್ರಿವಾಲ್ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದಾರೆ. ಇದೇ ಮಾದರಿ ನನ್ನ ಕ್ಷೇತ್ರದಲ್ಲಿ ತರುವ ಗುರಿ ಹೊಂದಿರುವೆ ಎಂದರು.

ಪ್ರೈವೇಟ್ ಸ್ಕೂಲ್‌ಗಳನ್ನೂ ಮೀರಿಸುವಂತೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಹೈಟೆಕ್ ಆಸ್ಪತ್ರೆ ನಿರ್ಮಿಸಿ ಬಡ ಜನರಿಗೆ ಉತ್ತಮ ಆರೋಗ್ಯ ಸಿಗುವಂತೆ ಕ್ರಮ ಕೈಗೊಳ್ಳುಲಾಗುವುದು. ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಕ್ಷೇತ್ರದಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ, ತಹಸೀಲ್ದಾರ್ ಮಹ್ಮದ್ ಮೋಸಿನ್ ಅಹ್ಮದ್, ಡಿಡಿಪಿಐ ಮಂಜುನಾಥ, ಸಹಾಯಕ ನಿರ್ದೇಶಕ ರಾಮಚಂದ್ರ, ಇಸಿಒ ಶರಣಗೌಡ, ಪ್ರಮುಖರಾದ ಶಿವರಾಜಕುಮಾರ, ಗುಂಡಪ್ಪ, ಮಲ್ಲಿಕಾರ್ಜುನ ಪೂಜಾರಿ, ವನಜಾಕ್ಷಿ, ಶರಣು ಆವಂಟಿ, ಕನಕಪ್ಪ, ಡಾ.ದೀಪಿಕಾ, ಎಸ್.ಎಂ. ಭೂತಾಳ, ಶ್ರೀಧರ, ಪ್ರಕಾಶ ನಿರೇಟಿ, ಜಿ.ತಮ್ಮಣ್ಣ, ಈಶ್ವರ ನಾಯಕ, ತಾಯಪ್ಪ ಬದ್ದೆಪಲ್ಲಿ, ಅಜಯರೆಡ್ಡಿ ಯಲ್ಲೇರಿ, ಪಿಡಿಒ ಮೊಹ್ಮದ್ ಅಲಿ ಇತರರಿದ್ದರು.