ಸವದತ್ತಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಮಹ್ಮದ್ ಕಿತ್ತೂರ, ಎಚ್.ಎಂ.ಮಲ್ಲನಗೌಡರ, ಶ್ರೀಪಾದ ಸಬನಿಸ, ಡಾ.ಎಸ್. ಟಿ.ಹಿತ್ತಲಮನಿ ಇತರರಿದ್ದರು. 
ಜಿಲ್ಲೆ

ದೃಷ್ಟಿಹೀನರಿಗೆ ಬೆಳಕಾಗಲು ಮುಂದಾಗಬೇಕು

ಸವದತ್ತಿ: ನೇತ್ರದಾನ ಮೂಲಕ ದೃಷ್ಟಿಹೀನರ ಬಾಳಿಗೆ ಬೆಳಕಾಗಲು ಮುಂದಾಗಬೇಕು. ಮರಣಾನಂತರ ನನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಇಲ್ಲಿನ ಎಸ್.ಕೆ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೇತ್ರದಾನ ಎಲ್ಲಕ್ಕಿಂತ ಶ್ರೇಷ್ಠವಾದುದು. ಯುವಕರು ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಸಾಧನೆ ಮಾಡಲು ಸಾಕಷ್ಟು ಮಾರ್ಗಗಳಿದ್ದು, ಆಸಕ್ತಿ ವಿಷಯವನ್ನು ಆಯ್ಕೆ ಮಾಡಿಕೊಂಡು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಶ್ರಮವಹಿಸಿದಲ್ಲಿ ಗುರಿ ತಲುಪಲು ಸಾಧ್ಯ ಎಂದರು.

ವೈದ್ಯ ಮಹ್ಮದ್ ಸಲೀಮ್ ಕಿತ್ತೂರ ಕಣ್ಣಿನ ಆರೈಕೆ ಕುರಿತು ವಿವರಿಸಿದರು. ವೈದ್ಯಾಧಿಕಾರಿ ಎಚ್.ಎಂ.ಮಲ್ಲನಗೌಡರ, ಆರೋಗ್ಯ ಅಧಿಕಾರಿ ಶ್ರೀಪಾದ ಸಬನಿಸ, ಡಾ.ಎಸ್.ಟಿ.ಹಿತ್ತಲಮನಿ, ಪ್ರಾಚಾರ್ಯ ಬಿ.ಕೆ.ಕಠಾರಿ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಪ್ರಭುನವರ, ಸುನೀಲ ಸುಳ್ಳದ ಇತರರು ಇದ್ದರು.