ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ವಿರುದ್ಧ ಸುಳ್ಳು ಆರೋಪ ಹೊರೆಸಿ ದೂರು ನೀಡಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರ ನೇತೃತ್ವದಲ್ಲಿ ನಗರದಲ್ಲಿ ನಿಯೋಗದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಐವರು ಸರ್ಕಾರಿ ನೌಕರರು ಷಡಾಕ್ಷರಿ, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರ ಮೇಲೆ ಅನೇಕ ಹುಸಿ ಆರೋಪ ಮಾಡಿ, ಆಡಳಿತಾಧಿಕಾರಿ ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ಆರೋಪಗಳು ಸಂಪೂರ್ಣ ಸತ್ಯಾಂಶ ರಹಿತವಾಗಿವೆ. ಹೀಗಾಗಿ ದೂರುದಾರರ ವಿರುದ್ಧ ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಉಪಾಧ್ಯಕ್ಷ ಓಂಕಾರ ಮಲ್ಲಿಗೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಉಮೇಶ ಪಾಟೀಲ, ಸಂಜೀವ ಬಿ. ಸೂರ್ಯವಂಶಿ, ಅನಿಲಕುಮಾರ, ಸಂತೋಷ ಚಲುವಾ, ದಯಾನಂದ ಮಮದೆ, ರಮೇಶ, ಮನೋಹರ ಕಾಶಿ, ಪ್ರವೀಣ ಪಾಲ್, ಬಸವರಾಜ ಪಾಟೀಲ, ಶಿವಲಿಂಗ, ಇಮ್ಯಾನುವೆಲ್, ಭೀಮರಾವ್ ಹಡಪದ, ಡಾ. ವೈಶಾಲಿ, ರೂಪಾದೇವಿ, ಸುಧಾಕರ್ ಶೇರಿಕಾರ್, ಅರವಿಂದ, ಹರಿದತ್ತ, ಸತೀಶ, ಶಿವಕುಮಾರ ಕಟ್ಟೆ, ಗಣಪತಿ, ಸುನೀಲಕುಮಾರ, ಕಾಶೀನಾಥ ಸ್ವಾಮಿ, ರಮೇಶ ಹಡಪದ ಇದ್ದರು.