ಶಿವಮೊಗ್ಗ: ಬೈಕ್ ಕಳವು ಮಾಡಲಾಗಿದೆ ಎಂದು ಶಿಕಾರಪುರ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಸಿಕ್ಕಿದ್ದು ಒಂಬತ್ತು ಬೈಕ್‌ಗಳು. ಅದು ಕೂಡ ಶಿವಮೊಗ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಆತ ಬೈಕ್ ಕಳವು ಮಾಡಿದ್ದು ತನಿಖೆಯಿಂದ ಬೆಳಕಿಗೆಬಂದಿದೆ.
ಶಿವಮೊಗ್ಗ 100 ಅಡಿ ರಸ್ತೆಯ ಹನುಮಂತನಗರದ ರಾಜಪ್ಪ(35) ಬಂಧಿತ. ಈತ ಕಳೆದ ಜು.16ರಂದು ಶಿಕಾರಿಪುರ ಠಾಣಾ ವ್ಯಾಪ್ತಿಯ ಸಂತೆ ಮಾರ್ಕೆಟ್ ಹತ್ತಿರದ ಚಾನಲ್ ಕೇರಿ ರಸ್ತೆಯಲೊ ಬೈಕ್ ಕಳ್ಳತನ ಮಾಡಿದ್ದ. ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸಿದ್ದಾರೆ.
ಈತ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಟೌನ್ ಮತ್ತು ದಾವಣಗೆರೆ ಜಿಲ್ಲೆಯ ಹರಿಹರ ಠಾಣಾ ವ್ಯಾಪ್ತಿಯಲ್ಲಿ ತಲಾ ಎರಡು ಬೈಕ್, ಮಲೆಬೆನ್ನೂರು, ಉಕ್ಕಡಗತ್ರಿ, ಇಚ್ಚಂಗಿದುರ್ಗ, ದಾವಣಗೆರೆ ಟೌನ್, ಶಿವಮೊಗ್ಗ ನಗರ, ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಬೈಕ್ ಕಳವು ಮಾಡಿದ್ದಾರೆ. ಬಂಧಿತನಿಂದ 2.65 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.