ಜಿಲ್ಲೆ

ದೂರವಾದ ಹಿಂದು-ಮುಸ್ಲಿಂ ಜೋಡಿ

ಎನ್.ವೆಂಕಟೇಶ್

 ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟ ಸೀಹಾ

ಚಿಕ್ಕಬಳ್ಳಾಪುರ: ತಾಲೂಕಿನ ಮೈಲಪನಹಳ್ಳಿಯ ದೇವಾಲಯದಲ್ಲಿ ಇತ್ತೀಚೆಗೆ ಮದುವೆಯಾಗಿ ನೂತನ ದಾಂಪತ್ಯಕ್ಕೆ ಕಾಲಿರಿಸಿದ್ದ ಹಿಂದು ಯುವಕ ಹಾಗೂ ಮುಸ್ಲಿಂ ಯುವತಿ ಬೇರ್ಪಟ್ಟಿದ್ದಾರೆ. ಎರಡು ವರ್ಷ ಪ್ರೀತಿಸಿದ್ದ ಗ್ರಾಮದ ನಾಗಾರ್ಜುನ (25) ಹಾಗೂ ಸೀಹಾ (23) ಪಾಲಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಇದಕ್ಕೆ ಪೊಲೀಸರು ರಕ್ಷಣೆ ನೀಡಿದ್ದರು. ದಂಪತಿ ತಂಟೆಗೆ ಹೋಗದಂತೆ ಎರಡೂ ಕುಟುಂಬಗಳಿಗೆ ಸೂಚಿಸಿದ್ದರು. ರಾಜಿ ಸಂಧಾನದ ಮೂಲಕ ಪ್ರೇಮ ವ್ಯವಹಾರಕ್ಕೆ ಅಂತ್ಯವಾಡುವ ದೊಡ್ಡವರ ಕಸರತ್ತು ಯಶಸ್ವಿಯಾಗಿರಲಿಲ್ಲ. ಈ ನಡುವೆ ಯುವತಿಯ ತಾಯಿ ಆರೋಗ್ಯ ಹದಗೆಡುತ್ತಿದ್ದು ಮಗಳ ಯೋಚನೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಸೀಹಾ ಹೆತ್ತಮ್ಮನ ಆರೋಗ್ಯದ ದೃಷ್ಟಿಯಿಂದ ಮತ್ತೆ ತಾಯಿ ಮನೆಗೆ ವಾಪಸಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದಾಳೆ ಎನ್ನಲಾಗಿದೆ.