ಬಿಜೆಪಿ ಮಂಡಲದಿಂದ ಹೊಳಲೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಡಿ.ಎಸ್.ಅರುಣ್, ಸುರೇಶ್, ಮಲ್ಲೇಶಪ್ಪ ಇತರರಿದ್ದರು. 
ಜಿಲ್ಲೆ

ದುಷ್ಟರನ್ನು ಸುಮ್ಮನೆ ಬಿಡುವ ಮಾತಿಲ್ಲ

ಹೊಳೆಹೊನ್ನೂರು: ಪುಣ್ಯಕ್ಷೇತ್ರಗಳ ಮೇಲೆ ಕಣ್ಣು ಹಾಕಿದ ದುಷ್ಟರನ್ನು ಸುಮ್ಮನೆ ಬಿಡುವ ಮಾತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.

ಧರ್ಮಸ್ಥಳಕ್ಕೆ ಕಳಂಕ ತರುವವರ ನಡೆ ಖಂಡಿಸಿ ಶನಿವಾರ ಶಿವಮೊಗ್ಗ ಗ್ರಾಮಾಂತರದ ಹೊಳಲೂರು ಹಾಗೂ ಹೊಳೆಹೊನ್ನೂರು ಬಿಜೆಪಿ ಮಂಡಲದಿಂದ ಹೊಳಲೂರಿನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಮಾತನಾಡಿದರು.

ಬುರುಡೆ ಕಥೆ ನಂಬಿ ಉತ್ಖನನಕ್ಕೆ ಮುಂದಾಗಿರುವ ಸರ್ಕಾರಕ್ಕೆ ಭವಿಷ್ಯವಿಲ್ಲ. ಹಿಂದು ವಿರೋ ಚಟುವಟಿಕೆಗಳಿಂದ ಧರ್ಮ ರಕ್ಷಣೆ ಸವಾಲಾಗುತ್ತಿದೆ. ಸನಾತನ ಧರ್ಮದ ರಕ್ಷಣೆಗೆ ಪ್ರತಿಯೊಬ್ಬರೂ ಪಣ ತೋಡಬೇಕು. ಹಿಂದುಗಳ ಮೇಲಿನ ದಬ್ಬಾಳಿಕೆ ನಿಲ್ಲುವಂತೆ ಕಾಣುತ್ತಿಲ್ಲ. ಹತ್ತಾರು ವರ್ಷಗಳಿಂದ ಶ್ರೀಕ್ಷೇತ್ರದ ಮಹಿಮೆ ಬಗ್ಗೆ ಅವಹೇಳನ ಮಾಡಲಾಗುತ್ತಿದೆ. ಅಪಪ್ರಚಾರದಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಯಾವುದೇ ದಕ್ಕೆ ಆಗುವುದಿಲ್ಲ ಎಂದರು.

ಮುಖಂಡ ಹೊಳಲೂರು ಸಂತೋಷ್ ಮಾತನಾಡಿ, ನಮ್ಮವರೆ ನಮ್ಮ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಧರ್ಮಸ್ಥಳ ಕ್ಷೇತ್ರವನ್ನು ಸುಪರ್ದಿಗೆ ತೆಗೆದುಕೊಂಡು ಹಿಂದು ಭಾವನೆಗೆ ದಕ್ಕೆ ತರುವ ಪ್ರಯತ್ನಗಳು ದಶಕಗಳಿಂದಲೂ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ದುಷ್ಟ ಸಂಘಟನೆಗಳ ಕುಮ್ಮಕು ಪಡೆದು ಹಿಂದು ಧಾರ್ಮಿಕ ಕ್ಷೇತ್ರಕ್ಕೆ ಕಳಂಕ ತರಲು ತೆರೆಮರೆಯಲ್ಲಿ ಸಂಚು ರೂಪಿಸುತ್ತಿದೆ. ಹಿಂದು ಸಂಘಟನೆಗಳು ಸರ್ಕಾರಕ್ಕೆ ತಕ್ಕಪಾಠ ಕಲಿಸಬೇಕು ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ಸಿಂಗನಹಳ್ಳಿ ಸುರೇಶ್, ಮಲ್ಲೇಶಪ್ಪ, ಕಿರಣ್‌ಕುಮಾರ್, ಜಗದೀಶಗೌಡ, ಎಸ್. ಶ್ರೀನಿವಾಸ್, ತಮಡಿಹಳ್ಳಿ ನಾಗರಾಜ್, ಡಿ.ಮಂಜುನಾಥ್, ಸುಬ್ರಮಣಿ, ವಿರೂಪಾಕ್ಷಪ್ಪ, ಗೀತಾ ವೇದಾಮೂರ್ತಿ, ವಿರೂಪಾಕ್ಷಪ್ಪ, ಪೇರುಮಾಳ್, ಎ.ಕೆ.ತಿಪ್ಪೇಶ್, ಭಾಗ್ಯದೇವಿ, ದೇವರಾಜ್, ರಮೇಶ್, ಗಣೇಶ್, ಹನುಮಂತ ಪಾಟೀಲ್ ಇತರರಿದ್ದರು.

ಧರ್ಮ ವಿರೋಗಳ ಷಡ್ಯಂತ್ರಗಳು ಯಾವುದೇ ಕಾರಣಕ್ಕೂ ನಿರೀಕ್ಷಿತ ಫಲ ನೀಡುವುದಿಲ್ಲ. ತಲೆ ಬುರುಡೆ ಕಥೆ ನಂಬುತ್ತಿರುವ ಸರ್ಕಾರಕ್ಕೆ ತಲೆ ಇಲ್ಲ ಎಂಬುದು ಸರ್ವಕಾಲಿಕ ಸತ್ಯ. ಎಡಪಂಥಿಯರ ಮೆಚ್ಚುಗೆ ಗಳಿಸಲು ಗುಂಡಿ ತೆಗೆಯುವ ಸಾಹಸಕ್ಕೆ ಕೈಹಾಕಿದ್ದಾರೆ. ಕಾಲ್ಪನಿಕ ಕಥೆ ನೆಚ್ಚಿಕೊಂಡವರಿಗೆ ತಕ್ಕಶಾಸ್ತಿಯಾಗಲಿದೆ. ಇತ್ತೀಚಿನ ಬೆಳವಣಿಗೆಗಳಿಂದ ಭಕ್ತರ ಮನಸಿನ ಮೇಲೆ ಯಾವುದೇ ಕೆಟ್ಟ ಭಾವನೆ ವ್ಯಕ್ತವಾಗುವುದಿಲ್ಲ.

ಡಿ.ಎಸ್. ಅರುಣ್, ವಿಧಾನ ಪರಿಷತ್ ಸದಸ್ಯ