ಮೊಳಕಾಲ್ಮೂರು: ವಿದ್ಯಾರ್ಥಿ ಜೀವನ ಬಂಗಾರದ ಜೀವನವೆನ್ನುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ಅಧ್ಯಯನೆಡೆ ಮನಸ್ಸು ಕೇಂದ್ರೀಕರಿಸಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕೆಂದು ಮುರುಘಾಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಮುರುಘಾಮಠದಿಂದ ಅನುಭವ ಶ್ರಾವಣದ ಅಂಗವಾಗಿ ಶ್ರೀ ಚಿತ್ತರಗಿ ವಿಜಯಮಹಾಂತ ಶಿವಯೋಗಿಗಳ ಕುರಿತು ಪಟ್ಟಣದ ದುರ್ಗಾ ಪ್ರೌಢಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಚಿಂತನ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿವಿವೇಕಾನಂದ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸರ್ವಪಲ್ಲಿ ರಾಧಾಕೃಷ್ಣನ್, ಸರ್‌ಎಂ.ವಿಶ್ವೇಶ್ವರಯ್ಯ, ಮದರ್ ತೆರೇಸಾ ಅವರಂಥ ಮಹನೀಯರ ಆದರ್ಶಗಳ ಮಾರ್ಗದಲ್ಲಿ ನಡೆಯ ಬೇಕೆಂದರು.
ಸಮ್ಮುಖ ವಹಿಸಿದ್ದ ಸಿದ್ಧಯ್ಯನಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ದುಶ್ಚಟಗಳಿಗೆ ಒಳಗಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಬೇಕಿದೆ ಎಂದರು.
ಮುರುಘಾಮಠದ ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಮುಖ್ಯಶಿಕ್ಷಕ ಕುಮಾರಸ್ವಾಮಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಸಂಘಟನಾ ಕಾರ‌್ಯದ ರ್ಶಿ ಬಸವರಾಜ್ ಕಟ್ಟಿ ಮಾತನಾಡಿದರು. ಪಿ.ವೀರೇಂದ್ರಕುಮಾರ್, ಶಿಕ್ಷಕರು ವಿವಿಧ ಸಮಾಜಗಳ ಮುಖಂಡರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಕುಬೇರಪ್ಪ ನಿರೂಪಿಸಿದರು.