ಜಿಲ್ಲೆ

ದುರ್ಬಲ ವರ್ಗಗಳ ಅಭಿವೃದ್ಧಿಗೆ ಬದ್ಧ

ಪಿರಿಯಾಪಟ್ಟಣ: ಗ್ರಾಮೀಣ ಭಾರತ, ಶಿಕ್ಷಣ, ಸಾರಿಗೆ, ಕೃಷಿ ಮತ್ತು ಇತರ ದುರ್ಬಲ ವರ್ಗಗಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕೆ ಯೂನಿಯನ್ ಬ್ಯಾಂಕ್ ಬದ್ಧವಾಗಿದೆ ಎಂದು ಯೂನಿಯನ್ ಬ್ಯಾಂಕ್ ಜನರಲ್ ಮ್ಯಾನೇಜರ್ ಸತ್ಯಬನ್ ಬೆಹ್ರಾ ತಿಳಿಸಿದರು.


ಪಟ್ಟಣದ ಶ್ರೀ ಸಾಯಿಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಸಹಾಯ ಸಂಘಗಳಿಗೆ ಸಾಲ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಲೂಕಿನ ವಿವಿಧ ಸ್ವಸಹಾಯ ಗುಂಪುಗಳ 400ಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳಿಗೆ ಪಿರಿಯಾಪಟ್ಟಣದ ಯೂನಿಯನ್ ಬ್ಯಾಂಕ್ ವತಿಯಿಂದ ಸಾಲ ವಿತರಿಸಲಾಗುತ್ತಿದೆ ಎಂದರು.


ಆಕರ್ಷಕ ಬಡ್ಡಿದರದೊಂದಿಗೆ ಸಾಲವನ್ನು ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಗಮನಹರಿಸಲಾಗುವುದು. ನಮ್ಮಿಂದ ಸಾಲವನ್ನು ಪಡೆದ ಬಹುಪಾಲು ಸ್ವಸಹಾಯ ಗುಂಪುಗಳ ಫಲಾನುಭವಿಗಳು ಕೃಷಿ, ಕೃಷಿ-ಅಲೈಡ್‌ನಂತಹ ಆದಾಯ ಉತ್ಪಾದಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ಅನೇಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದರು.


ಮುಖ್ಯ ವ್ಯವಸ್ಥಾಪಕ ಪ್ರಶಾಂತ್ ಮಾತನಾಡಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪಿರಿಯಾಪಟ್ಟಣ ಶಾಖೆಯು 5 ಕೋಟಿ ರೂ. ಮೊತ್ತದ 30 ಎಸ್‌ಎಚ್‌ಜಿ ಸಾಲಗಳನ್ನು ಮಂಜೂರು ಮಾಡಿದೆ. ಈ ಸಾಲ ಮೇಳದಲ್ಲಿ ಎಲ್ಲ 25 ಗುಂಪುಗಳಿಗೆ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಿದೆ ಎಂದರು.

ಎಸ್‌ಆರ್‌ಎಲ್‌ಎಂ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ರುಬಾವೆಲ್ ಮಣಿಹರ್ ಅವರು ಮಹಿಳಾ ಸ್ವಸಹಾಯ ಸಂಘಗಳಿಗೆ ಎನ್‌ಆರ್‌ಎಲ್‌ಎಂ ಯೋಜನೆಯ ಬಗ್ಗೆ ವಿವರಿಸಿದರು. ರೀಜನಲ್ ಮ್ಯಾನೇಜರ್ ಎಸ್.ವಿಶ್ವಲತಾ, ಡಿವಿಜನಲ್ ಮ್ಯಾನೇಜರ್ ಎಚ್.ಮಹದೇವ, ಎಂಎನ್‌ಕೆ ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕ ಮಹದೇವ, ಪುನೀತ, ರಕ್ಷಿತ್‌ಕುಮಾರ್ ಹಾಜರಿದ್ದರು.