ಸೋಮವಾರಪೇಟೆ: ಇಲ್ಲಿನ ಕಕ್ಕೆಹೊಳೆಯ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಭುವನೇಶ್ವರಿದೇವಿ ದೇವಾಲಯದಲ್ಲಿ ಆಷಾಢ ಮಾಸದ ದುರ್ಗಾದೀಪ ನಮಸ್ಕಾರ ವಿಶೇಷ ಪೂಜೆ ಬುಧವಾರ ನಡೆಯಿತು.
ಸೋಮವಾರ ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮದೊಂದಿಗೆ ಪೂಜಾ ಕಾರ್ಯಗಳು ಆರಂಭವಾಗಿದ್ದು, ಆಷಾಢ ಮಾಸದಲ್ಲಿ ಪ್ರತಿ ದಿನ ಸಂಜೆ 6 ರಿಂದ 8ರವರೆಗೆ ಪ್ರಥಮ ದಿನದ ದುರ್ಗಾದೀಪ ನಮಸ್ಕಾರ ಪೂಜೆ ನಡೆಯಲಿದ್ದು, ಪ್ರತಿದಿನ ರಾತ್ರಿ 8 ಗಂಟೆಯ ನಂತರ ಅನ್ನದಾನ ಏರ್ಪಡಿಸಲಾಗಿದೆ.
ದೇವಾಲಯದ ಅರ್ಚಕರಾದ ಮಣಿಕಂಠ ನಂಬೂದರಿ ಹಾಗೂ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಪೂಜೆ ನಡೆಯುತ್ತಿದೆ. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್ ಮತ್ತಿತರರು ಇದ್ದರು.
ಸೋಮವಾರಪೇಟೆ ಶ್ರೀ ಅಯ್ಯಪ್ಪ ದೇವಾಲಯದ ಶ್ರೀ ಭಗವತಿ ದೇವಾಲಯದಲ್ಲಿ ಬುಧವಾರ ಆಷಾಢ ಮಾಸದ ವಿಶೇಷ ಪೂಜೆ ನಡೆಯಿತು.