ಜಿಲ್ಲೆ

ದುರ್ಗದಲ್ಲೇ ಪರವಾನಗಿ ನವೀಕರಣಕ್ಕೆ ಒತ್ತಾಯಿಸಿ ಮನವಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಭಾರೀ ವಾಹನ ಚಾಲಕರಿಗೆ ಜಿಲ್ಲಾ ಕೇಂದ್ರದಲ್ಲೇ ಪರವಾನಗಿ ನವೀಕರಿಸುವಂತೆ ಒತ್ತಾಯಿಸಿ ಜಿಲ್ಲಾ ಚಾಲಕರ ಕ್ಷೇಮಾಭಿವೃದ್ಧಿ ಒಕ್ಕೂಟ ದ ಪದಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿ ಮೂಲಕ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಪ್ರತಿ ಐದು ವರ್ಷಕ್ಕೊಮ್ಮೆ ಬಸ್ಸು,ಲಾರಿ ಮತ್ತಿತರ ಭಾರೀ ವಾಹನಗಳ ಚಾಲಕರು ಪರವಾನಗಿ ನವೀಕರಿಸಿಕೊಳ್ಳಲು ಬೆಂಗಳೂರು,ಧಾರವಾ ಡ,ಮಂಗಳೂರು ಹಾಗೂ ಕಲಬುರುಗಿಯಲ್ಲಿ ಅವಕಾಶ ಕಲ್ಪಿಸಿವೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಭಾರೀ ವಾಹನ ಚಾಲಕರಿದ್ದು,ದೂರದ ಜಿಲ್ಲೆಗಳಿಗೆ ತೆರಳಿ ಪರವಾನಗಿ ನವೀಕರಿಸಿ ಕೊಳ್ಳುವುದು ಕಷ್ಟವಾಗುತ್ತದೆ.ಆದ್ದರಿಂದ ಜಿಲ್ಲಾ ಕೇಂದ್ರದಲ್ಲೇ ಪರವಾನಗಿ ನವೀಕರಿಸಲು ಅವಕಾಶ ನೀಡುವಂತೆ ಚಾಲಕರ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಎಚ್.ಮಂಜುನಾಥ್,ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳಿಸಿಂಗೆ ಅವರಿಗೆ ಮನವಿ ಸಲ್ಲಿಸಿದರು.ಆರ್.ಪರ ಮೇಶ್ವರಪ್ಪ,ರಾಘವೇಂದ್ರ,ಕೆ.ಟಿ.ಕುಮಾರ್,ಶಾನ್‌ನವಾಜ್,ವಕೀಲ ಪ್ರತಾಪ್‌ಜೋಗಿ ಇತರರು ಇದ್ದರು.