ಜಿಲ್ಲೆ

ದುರ್ಗದಲ್ಲಿ ಸಂಚರಿಸಿದ ಬಸವ ಬೈಕ್ ರ‌್ಯಾಲಿ

ಚಿತ್ರದುರ್ಗ: ವಿಶ್ವ ಗುರು, ಮಹಾನ್ ಮಾನವತಾವಾದಿ, ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಜಯಂತ್ಯುತ್ಸವದ ಅಂಗವಾಗಿ ವೀರಶೈವ ಸಮಾಜದಿಂದ ನಗರದಲ್ಲಿ ಮಂಗಳವಾರ ಬೈಕ್ ರ‌್ಯಾಲಿ ನಡೆಸಲಾಯಿತು.

ಚಂದ್ರವಳ್ಳಿ ಕ್ರಾಸ್‌ನಲ್ಲಿನ ಬಸವ ಪುತ್ಥಳಿಗೆ ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಅವರಿಂದ ಪುಷ್ಪ ನಮನದ ಬಳಿಕ ರ‌್ಯಾಲಿ ಆರಂಭವಾಯಿತು.

ಬೈಕ್‌ಗಳಿಗೆ ಬಸವೇಶ್ವರ ಭಾವಚಿತ್ರವಿದ್ದ ಧ್ವಜಗಳನ್ನು ಕಟ್ಟಲಾಗಿತ್ತು. ಬಸವೇಶ್ವರರ ಚಿತ್ರವಿದ್ದ ಟೋಪಿ ಧರಿಸಿದ್ದ ಸವಾರರು ಮಾರ್ಗದುದ್ದಕ್ಕೂ ಜೈ ಬಸವೇಶ, ಜೈ ಜೈ ಬಸವೇಶ, ಬಸವೇಶ್ವರ ಮಹಾರಾಜ್ ಕೀ ಜೈ ಎಂಬಿತ್ಯಾದಿ ಘೋಷಣೆಗಳೊಂದಿಗೆ ಸಾಗಿದರು. ಹೊಳಲ್ಕೆರೆ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿಸರ್ಕಲ್, ಆನೆಬಾಗಿಲು, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನ ಬಾಗಿಲು ಬಸವ ಮಂಟಪ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮದಕರಿ ನಾಯಕರ ವೃತ್ತ, ಜಿಲ್ಲಾಸ್ಪತ್ರೆ ಮುಂಭಾಗ, ಕೆಳಗೋಟೆ, ವೀರ ವನಿತೆ ಒನಕೆ ಓಬವ್ವ ವೃತ್ತ, ವಿಪಿ ಬಡಾವಣೆ, ಜೆಸಿಆರ್ ಬಡಾವಣೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ರ‌್ಯಾಲಿ ಸಂಚರಿಸಿತು.

ವೀರಶೈವ ಸಮಾಜದ ಕಾರ‌್ಯದರ್ಶಿ ವೀರೇಂದ್ರಕುಮಾರ್, ವೀರಶೈವ-ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ್ ದಾಳಿಂಬೆ, ಸೈಟ್ ಬಾಬಣ್ಣ, ಜಿಮ್ಮಿ ಅಶೋಕ್, ಮಹಡಿ ಶಿವಮೂರ್ತಿ, ವೀರೇಶ್, ಕಾರ್ತಿಕ್, ಗಣೇಶ್, ಶಿವಯೋಗಿ, ನಂದಿಪುರ ನಾಗರಾಜ್, ಪರಮೇಶ್, ರುದ್ರಪ್ಪ ಇತರರಿದ್ದರು.