ಜಿಲ್ಲೆ

ದುರ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಶುಕ್ರವಾರ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹಾಗೂ ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ಅವರು ಭೂಮಿಪೂಜೆ ನೆರವೇರಿಸಿದರು. ನಗರಕ್ಕೆ ಮಂಜೂರಾಗಿದ್ದ ಮುಖ್ಯಮಂತ್ರಿ ವಿಶೇಷ ಅನುದಾನ 7.50 ಕೋಟಿ ರೂ.ಅನುದಾನದಲ್ಲಿ,2.05 ಕೋಟಿ ರೂ.ವೆಚ್ಚದ ಸಿ.ಸಿ.ರಸ್ತೆ, ಸಿ.ಸಿ.ಚರಂಡಿ,ಡೆಕ್ ಸ್ಲಾಬ್, ಒಳಚರಂಡಿ,ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು.

ಡಸ್ಟ್‌ಬಿನ್‌ವಿತರಣೆ

ನಗರದ ವಾರ್ಡ್ ನಂ.33ರ ಪ್ರಶಾಂತ ನಗರದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಹಸಿ ಕಸ ಒಣ ಕಸ ವಿಂಗಡಿಸಿ ನೀಡಲು 10 ಜನರಿಗೆ ಸಾಂಕೇತಿಕವಾಗಿ ಡಸ್ಟ್ ಬಿನ್‌ಗಳನ್ನು ವಿತರಿಸಿದರು. 20 ಲಕ್ಷ ರೂ.ವೆಚ್ಚದಲ್ಲಿ 10,900 ಡಸ್ಟ್‌ಬಿನ್‌ಗಳನ್ನು ಖರೀದಿಸಲಾಗಿದೆ. ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ,ಪೌರಾಯುಕ್ತೆ ಎಂ.ರೇಣುಕಾ,ಸದಸ್ಯರಾದ ನಾಗಮ್ಮ,ಪೂಜಾಯೋಗಿ,ಗೀತಾ,ಚಂದ್ರಶೇಖರ್,ಮೀನಾಕ್ಷಿ,ಶಶಿಧರ್, ತಾರಕೇಶ್ವರಿ,ಗೊಪ್ಪೆಮಂಜುನಾಥ್,ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮತ್ತಿತರರು ಪ್ರಮುಖರು,ನಾಮನಿರ್ದೇಶನ ಸದಸ್ಯರು ಹಾ ಗೂ ನಗರಸಭೆ ಅಧಿಕಾರಿ,ಸಿಬ್ಬಂದಿ ಇದ್ದರು.