ಜಿಲ್ಲೆ

ದುರ್ಗಕ್ಕೆ ಯೋಗಿ ಆದಿತ್ಯನಾಥ್

ಚಿತ್ರದುರ್ಗ: ಲೋಕಸಭಾ ಎನ್‌ಡಿಎ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರು ಯುಗಾದಿ ಮಾರನೇ ದಿನದಿಂದ ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ ನಡೆಸಲಿದ್ದಾರೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜ ಯೇಂದ್ರ ಅವರು ಏ.10ರಂದು ಹೊಸದುರ್ಗ,12ರಂದು ಹೊಳಲ್ಕೆರೆಗೆ ಭೇಟಿ ನೀಡಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು 16 ಅಥವಾ 17ರಂದು ಹಿರಿಯೂರಿಗೆ ಬರಲಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು 17ಅಥವಾ 18ರಂದು ಮೊಳಕಾಲ್ಮೂರು, ಚಳ್ಳಕೆರೆ,ಪಾವಗಡದಲ್ಲಿ ಪ್ರವಾಸ ನಡೆಸಲಿದ್ದಾರೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ದುರ್ಗಕ್ಕೆ ಆಗ ಮಿಸಲಿದ್ದು,ದಿನಾಂಕ ನಿಶ್ಚಯವಾಗಬೇಕಿದೆ. ಪಕ್ಷದ ರಾಷ್ಟ್ರೀಯ,ರಾಜ್ಯನಾಯಕರ ಪ್ರವಾಸ ದಿನಾಂಕಗಳೂ ನಿಗದಿ ಆಗ ಬೇಕಿವೆ ಎಂದರು.