ಚಿತ್ರದುರ್ಗ: ಜಿಲ್ಲೆಗೆ ಇನ್ನೊಂದು ಜವಾಹರ್ ನವೋದಯ ವಿದ್ಯಾಶಾಲೆ ಮಂಜೂರು ಮಾಡುವಂತೆ ಸಂಸದ ಗೋವಿಂದ ಎಂ.ಕಾರಜೋಳ ಅವರು ಹೊಸ ದಿಲ್ಲಿ ಬುಧವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದಾರೆ. ಸಚಿವರನ್ನು ಭೇಟಿ ಮಾಡಿದ ಸಂಸದರು ಚಿತ್ರ ದುರ್ಗಕ್ಕೆ ಕೇಂದ್ರೀಯ ವಿದ್ಯಾಶಾಲೆ ಮಂಜೂರು ಮಾಡಿರುವುದಕ್ಕೆ ಕೃತಜ್ಞತೆಯೊಂದಿಗೆ ಜಿಲ್ಲೆಗೆ ಮತ್ತೊಂದು ಜವಾಹರ್ ನವೋದಯ ವಿದ್ಯಾ ಶಾಲೆ ಮಂಜೂರು ಮಾಡುವಂತೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕು ಉಡುವಳ್ಳಿಯಲ್ಲಿ 1987ರಿಂದ ಜವಾಹರ್ ನವೋದಯ ವಿದ್ಯಾಶಾಲೆ ಕಾರ್ಯನಿರ್ವಹಿಸುತ್ತಿದೆ,ಆದರೆ ಚಿ ತ್ರದುರ್ಗ ಶೈಕ್ಷಣಿಕವಾಗಿ ಅತೀ ಹಿಂದುಳಿದ ಜಿಲ್ಲೆಯಾಗಿದ್ದು,ಇಲ್ಲಿನ ಜನರ ಆರ್ಥಿಕ ಜೀವನ ಮಟ್ಟ ತೃಪ್ತಿದಾಯಕವಾಗಿಲ್ಲ. ಇಲ್ಲಿ ಕೃಷಿಕರ ಬದು ಕು ಕೂಡ ಮಳೆಯನ್ನೇ ನೆಚ್ಚಿಕೊಂಡಿರುವುದರಿಂದ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು,ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಜಿಲ್ಲೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಹಾಗೂ ಯಾದವ ಸಮುದಾಯದವರಿಗೆ ಕಷ್ಟವಾಗಿದೆ. ವರ್ಷಪೂರ್ತಿ ದುಡಿಯಲು ಕೆಲಸವಿದಲ್ಲದೇ ವರ್ಷ ನಾಲ್ಕೈದು ತಿಂಗಳು ಮಲೆನಾಡು ಭಾಗಕ್ಕೆ ಈ ಭಾಗಕ್ಕೆ ಜನರು ಕೆಲಸ ಅರಸಿಕೊಂಡು ಗುಳೆ ಹೋಗುತ್ತಾರೆ. ಇಂತಹ ಶೋಚನೀಯ ಸ್ಥಿತಿಯಲ್ಲಿರುವ ಜನರು ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸಲು ಸಾಧ್ಯವಾಗದಂತಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಮತ್ತೊಂದು ನವೋದಯ ವಿದ್ಯಾಶಾಲೆ ಮಂಜೂರು ಮಾಡಬೇಕೆಂಬ ತಮ್ಮ ಮನವಿಗೆ ಕೇಂದ್ರ ಶಿಕ್ಷಣ ಸಚಿವರು ಸಕ ರಾತ್ಮಕ ನಿಲುವು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.