ಆಲ್ದೂರು ಸಮೀಪದ ಇಳೆಖಾನ್ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಕೋಲುದೀಪಗಳನ್ನು ಹಚ್ಚಲು ಗ್ರಾಮಸ್ಥರು ಸೇರಿದ್ದರು. 
ಜಿಲ್ಲೆ

ದೀಪಾವಳಿ ಆಚರಣೆಗೆ ಮಳೆ ಅಡ್ಡಿ

ಆಲ್ದೂರು: ಮಲೆನಾಡಿನಲ್ಲಿ ಮಳೆ ನಡುವೆಯೂ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸೋಮವಾರ ಬಿಂಡಿಗ ದೇವೀರಮ್ಮನಿಗೆ ಆರತಿ ಬೆಳಗಿ ಹಬ್ಬ ಆಚರಿಸಿದರೆ, ಮಂಗಳವಾರ ಪಟ್ಟಣದ ಅಂಗಡಿಗಳಲ್ಲಿ ಧನಲಕ್ಷ್ಮೀ ಪೂಜೆ ಕಳೆಕಟ್ಟಿದರೆ, ಬುಧವಾರ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಬುಧವಾರ ಬೆಳಗ್ಗೆಯಿಂದ ಮಳೆ ಆರ್ಭಟ ಜೋರಾಗಿದ್ದು ರಾತ್ರಿ ಪೂರ್ತಿ ಬಿಡುವುಲ್ಲದೆ ಸುರಿದಿದ್ದು, ಮಳೆಯಲ್ಲೂ ಸಂಪ್ರದಾಯದಂತೆ ಮನೆ ಅಂಗಳದಲ್ಲಿ ದೀಪಗಳನ್ನು ಹಚ್ಚಲಾಯಿತು. ಆದರೆ ಬೆಳಗ್ಗೆಯಿಂದ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಸಂಜೆ ದೇವಸ್ಥಾನಗಳ ಮುಂದೆ ಕಾಫಿ ತೋಟಗಳು, ಗದ್ದೆಗಳು, ಮನೆಗಳ ಮುಂದೆ ಪಂಜುಗಳನ್ನು ಹಚ್ಚಿದರು. ಒಂದು ವಾರದಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಗುರುವಾರ ಬೆಳಗೆಯಿಂದ ಬಿಡುವು ನೀಡಿತು.