ಜಿಲ್ಲೆ

ದೀಪಾ ಅಕಾಡೆಮಿ ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಣೆ

Chamarajanagar


ಚಾಮರಾಜನಗರ : ದೀಪಾ ಅಕಾಡೆಮಿ ಆಶ್ರಮ ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ಉಚಿತವಾಗಿ ಶಾಲಾ ಸಮವಸ್ತ್ರ ನೀಡಲಾಗುತ್ತಿದೆ ಎಂದು ನಗರದ ವೈಯು ಖಾನ್ ತಿಳಿಸಿದರು.


ತಾಲೂಕಿನ ಭೋಗಪುರ ಗ್ರಾಮದಲ್ಲಿರುವ ದೀಪಾ ಅಕಾಡೆಮಿ ಆಶ್ರಮ ಶಾಲೆಯ ಮಕ್ಕಳಿಗೆ ಸೋಮವಾರ ಉಚಿತವಾಗಿ ಶಾಲಾ ಸಮವಸ ವಿತರಣೆ ಮಾಡಿ ಮಾತನಾಡಿದರು.


ನಾನು ಸಹ ಮಧ್ಯಮ ವರ್ಗದಿಂದ ಬಂದಂತಹ ವ್ಯಕ್ತಿ. ಶಾಲಾ ಮಕ್ಕಳ ಸಮವಸ ಹೊಲೆದು ಜೀವನ ನಡೆಸುತ್ತಿದ್ದೇನೆ. ದೀಪಾ ಅಕಾಡೆಮಿ ಆಶ್ರಮ ಶಾಲೆಯ ಮಕ್ಕಳನ್ನು ನೋಡಿದ ತಕ್ಷಣವೇ ಏನಾದ್ರು ಸಹಾಯ ಮಾಡಬೇಕೆಂಬ ಹಂಬಲದಿಂದ ಪ್ರತಿವರ್ಷ ಸಮವಸ್ತ್ರ ವಿತರಣೆ ಮಾಡುತ್ತಿದ್ದೇನೆ ಎಂದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮ್ಮದ್ ಮಾತನಾಡಿ, ಎಸ್‌ಡಿಪಿಐ ಸಂಘಟನೆಯ ವತಿಯಿಂದ ಪ್ರತಿವರ್ಷ ನಗರದಲ್ಲಿರುವ ವೃದ್ಧ ಆಶ್ರಮಕ್ಕೆ ಸಹಾಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಆಶ್ರಮಕ್ಕೆ ಕೈಲಾದಷ್ಟು ಸಹಾಯ ಮಾಡುತ್ತೇವೆ. ದೀಪಾ ಅಕಾಡೆಮಿ ಆಶ್ರಮ ಶಾಲೆಯ ಮಕ್ಕಳು ಧೃತಿಗೆಡದೆ ಎಲ್ಲ ಕ್ಷೇತ್ರದಲ್ಲೂ ಮುಂದೆ ಬರಬೇಕು. ಓದುವ ಛಲವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.


ನಗರಸಭೆ ಸದಸ್ಯ ಎಂ.ಮಹೇಶ್ ಗಾಳಿಪುರ, ಮುಸ್ಲಿಂ ಧರ್ಮ ಗುರು ಅಪ್ರೋಜ್ ಅಹಮದ್, ದೀಪಾ ಅಕಾಡೆಮಿ ಆಶ್ರಮ ಶಾಲೆಯ ಮುಖ್ಯಸ್ಥ ರವಿ ಮತ್ತು ಮಕ್ಕಳು ಹಾಜರಿದ್ದರು.