ಕುಶಾಲನಗರ: ಕಾರ್ತಿಕ ಮಾಸದಲ್ಲಿ ಪ್ರತಿದಿನ ದೀಪ ಗಳನ್ನು ಹಚ್ಚುವುದರಿಂದ ನಾವು ಮಾಡಿರುವ ಪಾಪ ಗಳು ಪರಿಹಾರವಾಗುತ್ತೆ ಎಂದು ಕನ್ಯಕಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಭಟ್ ತಿಳಿಸಿದರು.
ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ವಾಸವಿ ಯುವಜನ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ತಿಕ ಮಾಸದ ಪಾಡ್ಯದಿಂದ ಅಮಾವಾಸ್ಯೆ ತನಕ ಪ್ರತಿನಿತ್ಯ ದೀಪಗಳನ್ನು ಹಚ್ಚುವುದರಿಂದ ಇಡೀ ಲೋಕಕ್ಕೆ ಕಲ್ಯಾಣವಾಗುತ್ತೆ ಎಂಬುದು ಧಾರ್ಮಿಕ ಇತಿಹಾಸದಲ್ಲಿದೆ ಎಂದು ತಿಳಿಸಿದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಮಾತನಾಡಿದರು. ವಾಸವಿ ಯುವಜನ ಸಂಘದ ಅಧ್ಯಕ್ಷ ಪ್ರವೀಣ್, ಆರ್ಯ ವೈಶ್ಯ ಮಂಡಳಿ ಮಾಜಿ ಅಧ್ಯಕ್ಷ ವಿ.ಎನ್. ಪ್ರಭಾಕರ್, ಮಹಾಸಭಾದ ಕೊಡಗು ಜಿಲ್ಲಾ ಪ್ರತಿನಿಧಿ ಬಿ.ಆರ್. ನಾಗೇಂದ್ರ ಪ್ರಸಾದ್, ಜಿಲ್ಲಾಧ್ಯಕ್ಷ ಬಿ.ಎಲ್.ಸತ್ಯ ನಾರಾಯಣ, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವಜನ ಸಂಘದ ಉಪಾಧ್ಯಕ್ಷ ವಿ.ಜೆ.ಬಾಲಾಜಿ, ಕಾರ್ಯದರ್ಶಿ ಬಿ.ಎನ್.ಅನಜನ್, ಖಜಾಂಚಿ ಪ್ರಹ್ಲಾದ್, ಸಹ ಕಾರ್ಯದರ್ಶಿ ನಾಗ ಶ್ರೇಯಸ್, ಯುವಜನ ಸಂಘದ ಟ್ರಸ್ಟ್ ಉಪಾಧ್ಯಕ್ಷ ವಿ.ಜೆ.ಭಗವಾನ್, ಎಸ್.ಎಸ್.ಗೌತಮ್ಮ, ರಾಕೇಶ್, ಸಂಕೀರ್ತ್, ರವಿ ಪ್ರಕಾಶ್, ನಿಖಿಲ್ ಮತ್ತು ಬಿ.ಯು.ಕಾರ್ತಿಕ್ ಇತರರು ಹಾಜರಿದ್ದರು.