ಜಿಲ್ಲೆ

ದೀನ-ದಲಿತರ ಏಳಿಗೆಗೆ ಅವಿರತ ಶ್ರಮ

ಹನೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನವನ್ನು ಆಚರಿಸಲಾಯಿತು. ಮೂರ್ತಿ, ಸೋಮಶೇಖರ್, ಹರೀಶ್‌ಕುಮಾರ್, ದೇವಿಕಾ, ಸುಷ್ಮಾ ಇತರರು ಇದ್ದರು.

ಹನೂರು: ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದಲ್ಲಿನ ಅಸಮಾನತೆ ಹಾಗೂ ರಾಜಕೀಯ ಪರಿಸ್ಥಿತಿ ಅರಿತು, ಸಮಾನತೆ ತರುವ ನಿಟ್ಟಿನಲ್ಲಿ ದೇಶಕ್ಕೆ ಸಂವಿಧಾನ ಅರ್ಪಿಸಿದ ಮಹಾನ್ ಚೇತನ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ ಬಣ್ಣಿಸಿದರು.


ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ 66ನೇ ಮಹಾಪರಿನಿಬ್ಬಾಣ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅಸ್ಪಶ್ಯತೆಯ ಕಷ್ಟವನ್ನು ಅನುಭವಿಸಿ, ಮೇಲು-ಕೀಳೆಂಬ ಭಾವನೆಯನ್ನು ಬುಡ ಸಮೇತ ಕಿತ್ತೊಗೆಯಲು ಪಣ ತೊಟ್ಟ ಧೀಮಂತ ನಾಯಕ. ಸಮಾಜದಲ್ಲಿದ್ದ ತಾರತಮ್ಯವನ್ನು ಅರಿತು ಅಸ್ಪಶ್ಯತೆಯ ವಿರುದ್ಧ ಹೋರಾಡುವುದರ ಮೂಲಕ ದೀನದಲಿತರ ಏಳಿಗೆಗೆ ಅವಿರತವಾಗಿ ಶ್ರಮಿಸಿದರು. ಸಮಾಜದಲ್ಲಿನ ಭೇದ-ಭಾವವನ್ನು ತೊಡೆದು ಹಾಕಲು ಉನ್ನತ ವಿದ್ಯಾಭ್ಯಾಸವನ್ನು ಪಡೆದರು. ಇದರ ಫಲವಾಗಿಯೇ ಅವರು ಇಡೀ ದೇಶ ಅನುಸರಿಸುವಂತಹ ಕಾನೂನನ್ನು ಒಳಗೊಂಡಿರುವ ಸಂವಿಧಾನವನ್ನು ರಚಿಸಿ ದೇಶಕ್ಕೆ ಅರ್ಪಿಸಿದರು ಎಂದು ತಿಳಿಸಿದರು.


ಪಪಂ ಸದಸ್ಯರಾದ ಸೋಮಶೇಖರ್, ಹರೀಶ್‌ಕುಮಾರ್, ಸಮುದಾಯ ಸಂಘಟನಾಧಿಕಾರಿ ಪರಶಿವಮೂರ್ತಿ, ಪ್ರಭಾರ ಕಂದಾಯ ನಿರೀಕ್ಷಕ ಮಂಜುನಾಥ್, ನೌಕರರಾದ ದೇವಿಕಾ, ಸುಷ್ಮಾ, ಮಾದೇಶ್, ಪ್ರತಾಪ್, ಮದನ್‌ಕುಮಾರ್, ರಾಕೇಶ್, ಶರತ್, ಸುರೇಶ್, ಶ್ರೀನಿವಾಸ್ ಹಾಗೂ ಇನ್ನಿತರರು ಇದ್ದರು.