ಮದ್ದೂರು: ಸಮೀಪದ ಚಾಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತೆ ಕೆ.ದಿವ್ಯಾ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾದರು.
ಸೌಮ್ಯಾ ಪ್ರಕಾಶ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ದಿವ್ಯಾ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಕೆ.ಎಂ.ರೇಖಾ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷೆ ದಿವ್ಯಾ ಮಾತನಾಡಿ, ಎಲ್ಲ ಸದಸ್ಯರ ವಿಶ್ವಾಸ ಪಡೆದು ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಲ್ಲದೆ ಸರ್ಕಾರದ ಸಲವತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಾಸ ಭರವಸೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಬೋರಯ್ಯ, ಸದಸ್ಯರಾದ ಎಸ್.ಎಂ.ಗೌಡ, ಎಚ್.ಟಿ.ಅನಂತ್‌ಕುಮಾರ್, ಲತಾಕುಮಾರಿಮಂಜು, ಸಿದ್ದರಾಜು, ದೇಶಹಳ್ಳಿ ಆರ್.ಮೋಹನ್‌ಕುಮಾರ್, ಸಿದ್ದರಾಜು, ಪುಷ್ಪಾ ಮಹಾಲಿಂಗ, ಸುಬ್ರಮಣಿ, ಅರುಣ್‌ಕುಮಾರ್, ಮುಖಂಡರಾದ ವಿರೂಪಾಕ್ಷ, ರಾಕೇಶ್, ಕಾಡಪ್ಪ, ನಾಗರಾಜು, ಕೃಷ್ಣಪ್ಪ, ಪಿಡಿಒ ಸಂದೀಪ್ ಇದ್ದರು.