ಶಿರಪೆವಾಡಿ ಗ್ರಾಮದಲ್ಲಿರುವ ಆಕ್ಸಿಜನ್ ಸಿಲಿಂಡರ್ ಉತ್ಪಾದನೆ ಘಟಕ. 
ಜಿಲ್ಲೆ

ದಿನವೂ 500 ಆಕ್ಸಿಜನ್ ಸಿಲಿಂಡರ್ ಉತ್ಪಾದನೆ

ಬೋರಗಾಂವ: ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ ಎದುರಾಗಿರುವ ಬೆನ್ನಲ್ಲೇ ಸಮೀಪದ ಶಿರಪೆವಾಡಿ ಗ್ರಾಮದಲ್ಲಿನ ಆಕ್ಸಿಜನ್ ಉತ್ಪಾದನೆ ಘಟಕ ಕಳೆದ ಮಾರ್ಚ್ ತಿಂಗಳಿಂದ ದಿನ ನಿತ್ಯ 500 ಆಕ್ಸಿಜನ್ ಸಿಲಿಂಡರ್‌ಉತ್ಪಾದನೆ ಮಾಡುವ ಮೂಲಕ ಗಮನ ಸೆಳೆದಿದೆ.

ಡಾ.ಆಶೀಶ್ ಪಾಟೀಲ ಮತ್ತು ಮಿಲಿಂದ್ ಚೌಗುಲೆ ಅವರು ಶಿರಪೆವಾಡಿ ಗ್ರಾಮದಲ್ಲಿ ಆಕ್ಸಿಜನ್ ಉತ್ಪಾದನೆ ಘಟಕ ಸ್ಥಾಪಿಸಿದ್ದಾರೆ. ಕರೊನಾದ 2ನೇ ಅಲೆಯಲ್ಲಿ ಬಹುಬೇಡಿಕೆ ಇದ್ದರೂ ಅಗತ್ಯ ಇರುವವರಿಗೆ ಕೈಗೆಟುಕುವ ಬೆಲೆಯಲ್ಲಿ ಶಿಲಿಂಡರ್ ಪೂರೈಕೆಮಾಡಿ ಸಮಾಜಿಕ ಕಳಕಳಿ ಮೆರೆದಿದ್ದಾರೆ.

ಬೇಡಿಕೆಗೆ ತಕ್ಕಂತೆ ಬೆಳಗಾವಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರದ ಪುಣೆ, ಮುಂಬೈ, ಸೊಲ್ಲಾಪುರ, ನಾಂದೆಡ, ವಾಸಿಮ್ ಪ್ರದೇಶಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಆಕ್ಸಿಜನ್ ಉತ್ಪಾದನೆ ಘಟಕ ನಿರ್ಮಿಸಲು ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಆದರೆ, ಇದೀಗ ಕರೊನಾ ಸೋಂಕು ವ್ಯಾಪಕವಾಗಿದ್ದರಿಂದ ಬಡವರಿಗೆ ಆಕ್ಸಿಜನ್ ಸಿಲಿಂಡರ್ ಸಕಾಲಕ್ಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಉಭಯ ರಾಜ್ಯಗಳಿಗೆ ಪೂರೈಕೆ ಮಾಡುತ್ತಿದ್ದಾರೆ.