ಯಾದಗಿರಿ: ನಿತ್ಯ ತಪ್ಪದೆ ದಿನಪತ್ರಿಕೆಗಳು ಓದುವುದರಿಂದ ನಮ್ಮ ಅಂತರಂಗ ಸೌಂದರ್ಯ ಹೆಚ್ಚಲಿದೆ ಎಂದು ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಅಭಿಪ್ರಾಯಪಟ್ಟರು.
77ನೇ ಅಮೃತ ಸ್ವಾತಂತ್ರ್ಯೋತ್ಸವದ ನಿಮಿತ್ತ ನಾಡಿನ ನಂ.01 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಸೋಮವಾರ ನಗರದ ಸಕರ್ಾರಿ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕನ್ನಡ ಪದಬಂಧ ಸ್ಪಧರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ದಿನಪತ್ರಿಕೆಗಳು ನಮ್ಮ ಜ್ಞಾನದ ಬಂಢಾರವನ್ನು ವೃದ್ಧಿಸುತ್ತವೆ. ಸಮಾಜದ ವಿದ್ಯಮಾನಗಳ ಬಗ್ಗೆ ನಿತ್ಯ ಓದುಗರಿಗೆ ಸುದ್ದಿ ರೂಪದಲ್ಲಿ ವಿಸ್ತ್ರತ ಮಾಹಿತಿ ಕೊಡುತ್ತವೆ. ಕಾಲೇಜು ವಿದ್ಯಾಥರ್ಿಗಳು ತಪ್ಪದೇ ಪತ್ರಿಕೆಗಳನ್ನು ಓದುವಂತೆ ಸಲಹೆ ನೀಡಿದರು.
ಒಂದು ಕಾಲಕ್ಕೆ ನಾನೂ ಸಹ ದಿನಪತ್ರಿಕೆಗಳನ್ನು ಮನೆ,ಮನೆಗೆ ಹಂಚುತ್ತಿದ್ದೆ. ನಂತರ ರಾಜ್ಯಮಟ್ಟದ ಪತ್ರಕೆಯೊಂದರ ಅರೆಕಾಲಿಕ ವರದಿಗಾರನಾಗಿ, ಅಂಕಣ ಬರೆದಿದ್ದೇನೆ. ವಿಜಯವಾಣಿ ಪತ್ರಿಕೆ ನಾಡಿನ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿದೆ. ಕೇವಲ ಸುದ್ದಿ ಮಾತ್ರವಲ್ಲದೆ, ಹಲವು ರಚನಾತ್ಮಕ ಚಟುವಟಿಕೆಗಳ ಮೂಲಕ ಕನ್ನಡಿಗರ ಮನ ಗೆದ್ದಿದೆ. ವಿದ್ಯಾಥರ್ಿಗಳಿಗೆ ಆಯೋಜಿಸಿರುವ ಇಂಥ ಸ್ಪಧರ್ೆಗಳಲ್ಲಿ ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.
ಬಹುಮಾನ ಪಡೆದವರು ಮಾತ್ರ ಬುದ್ಧಿವಂತರು. ಇಲ್ಲದವರು ದಡ್ಡರು ಭಾವಿಸಬೇಡಿ. ಯಾವುದೇ ಸ್ಪಧರ್ೆ ಇರಲಿ ಮೊದಲು ಭಾಗವಹಿಸುವ ಮನೋಗುಣ ಬೆಳಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮಲ್ಲಿನ ಸಾಮಾನ್ಯ ಜ್ಞಾನ ವೃದ್ಧಿಗೊಳ್ಳುತ್ತದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಮಾತನಾಡಿ, ಇಂದಿನ ವಿದ್ಯಾಥರ್ಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದರಿಂದ ಜ್ಞಾನ ವೃದ್ಧಿಸುವ ಬದಲು ಕಡಿಮೆಯಾಗುತ್ತಿದೆ. ವಿಜಯವಾಣಿ ದಿನಪತ್ರಿಕೆ ಆರಂಭದಿಂದಲೂ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ಕಾಲೇಜಿನಲ್ಲಿ ಇಂಥ ಕಾರ್ಯಕ್ರಮ ಆಯೋಜನೆ ಮಾಡಲಿ, ಇದಕ್ಕೆ ನಮ್ಮ ಪರಿಷತ್ತಿನ ಸಹಯೋಗ ಇರಲಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ದಿನಪತ್ರಿಕೆಗಳ ಪಾತ್ರ ಮಹತ್ವದ್ದಾಗಿತ್ತು. ದೇಶಭಕ್ತಿಯ ಬಗ್ಗೆ ಜನರನ್ನು ಬಡಿದೆಬ್ಬಿಸುವ ಕೆಲಸ ಅಂದು ಪತ್ರಿಕೆಗಳ ಮೂಲಕ ಅನೇಕ ಹೋರಾಟಗಾರರು ಮಾಡಿದ್ದರು. ಸ್ವಾತಂತ್ರ್ಯ ದಿನದ ನಿಮಿತ್ತ ವಿಜಯವಾಣಿ ವಿದ್ಯಾಥರ್ಿಗಳಿಗೆ ಆಯೋಜಸಿರುವ ಈ ಪದಬಂಧ ಸ್ಪಧರ್ೆ ನಿಜಕ್ಕೂ ಔಚಿತ್ಯಪೂರ್ಣವಾಗಿದೆ ಎಂದರು.
ಜಿಲ್ಲಾ ವರದಿಗಾರ ಲಕ್ಷ್ಮೀಕಾಂತ್ ಕುಲಕಣರ್ಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ರಾಘವೇಂದ್ರ ಬಂಡೀಮನಿ ನಿರೂಪಿಸಿದರು. ಉಪನ್ಯಾಸಕಿ ಶಹನಾಜ್ ಬೇಗಂ, ಪ್ರಸಾರಾಂಗ ವಿಭಾಗದ ಪ್ರತಿನಿ ಗುರುರಾಜ ದೇಸಾಯಿ ಇದ್ದರು. ವಿವಿಧ ಕಾಲೇಜುಗಳಿಂದ ಸುಮಾರು 250ಕ್ಕೂ ಹೆಚ್ಚು ವಿದ್ಯಾಥರ್ಿ, ವಿದ್ಯಾಥರ್ಿನಿಯರು ಭಾಗವಹಿಸಿದ್ದರು.