ಜಿಲ್ಲೆ

ದಿನನಿತ್ಯ ಸಾಮಗ್ರಿ ಬೆಲೆ ಏರಿಕೆಯಿಂದ ಸಂಕಷ್ಟ

ಕಂಪ್ಲಿ: ಪ್ರಜಾತಂತ್ರದ ಬುನಾದಿಯನ್ನು ಬಲಗೊಳಿಸಲು ಸಂವಿಧಾನ ರಕ್ಷಣಾ ಪಡೆಯ ರಚನೆ ಅಗತ್ಯವಿದೆ ಎಂದು ಕರ್ನಾಟಕ ಜನಶಕ್ತಿ ಜಿಲ್ಲಾ ಮುಖಂಡ ವಸಂತರಾಜ ಕಹಳೆ ಹೇಳಿದರು.

ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ರಕ್ಷಣಾ ಪಡೆಯ ಭಿತ್ತಿಪತ್ರ, ಕರಪತ್ರಗಳನ್ನು ಬುಧವಾರ ಬಿಡುಗಡೆಗೊಳಿಸಿ ಮಾತನಾಡಿ, ದಿನೇ ದಿನೆ ದಿನಸಿ ಸಾಮಾಗ್ರಿ ಬೆಲೆ ಏರುತ್ತಿದ್ದು ಜೀವನ ದುಸ್ತರವಾಗುತ್ತಿದೆ. ಶಿಕ್ಷಣ, ಆರೋಗ್ಯ ಬಡವರ ಕೈಗೆಟುಕದಷ್ಟು ದುಬಾರಿಯಾಗಿವೆ. ಸಂವಿಧಾನದ ಆಶಯದ ಮೇಲೆ ದೇಶವನ್ನು ಭದ್ರನೆಲೆಗಟ್ಟಿನ ಮೇಲೆ ಮರು ನಿರ್ಮಿಸುವ ಅಗತ್ಯತೆಯಿದೆ. ಈ ಹಿನ್ನೆಲೆಯಲ್ಲಿ ಏ.26ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಂಡಿದ್ದು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಸಂಘಟನೆಗಳ ಪ್ರಮುಖರಾದ ನೀಲಪ್ಪ, ನಿರಂಜನ್, ಧನಂಜಯ, ಶಾಂತಪ್ಪ ಪೂಜಾರಿ, ಗಂಗಣ್ಣ, ಗಿರೀಶ, ಪರಶುರಾಮ್, ಬಸವರಾಜ, ಮುದ್ದಾಪುರ್ ಯಲ್ಲಪ್ಪ, ಕಂಪ್ಲಿ ಬಸಪ್ಪ, ಸೋನಾಪುರ್ ಮರಿಯಪ್ಪ ಇತರರಿದ್ದರು.