ಜಿಲ್ಲೆ

ದಿನನಿತ್ಯ ಈಶ್ವರಲಿಂಗಕ್ಕೆ ಸೂರ್ಯದೇವ ಸ್ಪರ್ಶ, ಕೌತುಕಕ್ಕೆ ಕಾರಣವಾದ  ಹುಕ್ಕೇರಿ ಈಶ್ವರಲಿಂಗ ದೇವಸ್ಥಾನ

ದಿನನಿತ್ಯ ಈಶ್ವರಲಿಂಗಕ್ಕೆ ಸೂರ್ಯದೇವ ಸ್ಪರ್ಶ,

ಕೌತುಕಕ್ಕೆ ಕಾರಣವಾದ  ಹುಕ್ಕೇರಿ ಈಶ್ವರಲಿಂಗ ದೇವಸ್ಥಾನ

ಆನಂದ ಭಮ್ಮನ್ನವರ ಚಿಕ್ಕೋಡಿ

ವಿಜಯವಾಣಿ ಸುದ್ದಿಜಾಲ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹಳೇ ತಹಶೀಲ್ದಾರ ಕಚೇರಿ ಆವರಣದಲ್ಲಿರುವ ಐತಿಹಾಸಿಕ ಈಶ್ವರಲಿಂಗ ದೇವಸ್ಥಾನ  ಅಚ್ಚರಿಗೆ ಸಾಕ್ಷಿಯಾಗಿದೆ. ದೇವಸ್ಥಾನದಲ್ಲಿ ಪ್ರತಿನಿತ್ಯ ಸೂರ್ಯ ಈಶ್ವರಲಿಂಗನಿಗೆ ಸ್ಪರ್ಶ ಮಾಡಿಯೇ ಹೋಗುವದು ದೇವಸ್ಥಾನದ ವಿಶೇಷ.

ಬೆಂಗಳೂರಿನ ಗವಿಗಂಗಾದೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ದಿನದಂದು ಮಾತ್ರ  ಶಿವಲಿಂಗಕ್ಕೆ ನೇಸರ ಸ್ಪರ್ಶ ಮಾಡಿ ಹೋದರೇ ಹುಕ್ಕೇರಿಯ ಈಶ್ವರಲಿಂಗ ದೇವಸ್ಥಾನದಲ್ಲಿ ದಿನನಿತ್ಯ ಸೂರ್ಯ ಶಿವನ ಸ್ಪರ್ಶ ಮಾಡುವದು ವಿಶೇಷ.ಬೆಳಿಗ್ಗೆ 7:30 ರಿಂದ 8 ಗಂಟೆಯ ಒಳಗೆ ಕೆಲ ಕಾಲ ಸೂರ್ಯ ಈಶ್ವರಲಿಂಗನ ಸ್ಪರ್ಶ ಮಾಡುತ್ತಾನೆ. ಅಂದಾಜು 500 ರಿಂದ 600 ವರ್ಷ ಪುರಾತನ ಐತಿಹಾಸಿಕ ಲಿಂಗ ಇದಾಗಿದೆ‌. ಮೊದಲು ಹಳೆಯ ಕಟ್ಟದಲ್ಲಿದ್ದ ಈ ಲಿಂಗವನ್ನ ನೂತನ ದೇವಸ್ಥಾನ ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ.ನೂತನ ದೇವಸ್ಥಾನದಲ್ಲೂ ಈಶ್ವರಲಿಂಗಕ್ಕೆ ಸೂರ್ಯದೇವ ಸ್ಪರ್ಶ ಮಾಡಿ ಹೋಗುತ್ತಿರುವದು ಅಚ್ಚರಿಗೆ ಕಾರಣವಾಗಿದೆ. ಸಕಲ ಇಷ್ಟಾರ್ಥಗಳನ್ನ ಪೂರೈಸುವ  ಸುಪ್ರಸಿದ್ದ ಈಶ್ವರ ಲಿಂಗ ದೇವಸ್ಥಾನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸೂರ್ಯ ದೇವನ ಸೃಷ್ಟಿಕರ್ತನ ಪಾದಕ್ಕೆ ತಗುಲಿ ಹೋಗುವ ಕಾರಣ ಈಶ್ಚರ ಲಿಂಗಕ್ಕೆ ತನ್ನದೇ ಆದ ಶಕ್ತಿ ಇದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಸೂರ್ಯ ಶಿವನ ಸ್ಪರ್ಶ ಮಾಡಿ ಹೋಗುವ ಕೆಲವೇ ಕೆಲುವು ದೇವಸ್ಥಾನಗಳಿದ್ದು ಅದರಲ್ಲಿ ಹುಕ್ಕೇರಿ ಪಟ್ಟಣದ ಈಶ್ವರಲಿಂಗ ದೇವಸ್ಥಾನವೂ ಒಂದು.ಶಿವ ಭಕ್ತರು ಈ ಕೌತುಕವನ್ನ ಬೆಳಗಿನ ಜಾವ ತೆರಳಿ ದಿನನಿತ್ಯ ಕಣ್ಣು ತುಂಬಿಕೊಂಡು ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ.