ರಾಯಚೂರು: ನಗರದಲ್ಲಿ ದಿನಗೂಲಿ ಆಧಾರದ ಮೇಲೆ ಸೇವೆಯನ್ನು ಮುಂದುವರಿಸಬೇಕು ಹಾಗೂ ಬಾಕಿ ವೇತನವನ್ನು ಪಾವತಿಸುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಮಹ್ಮದ್ ಆಸ್ೀಗೆ ಮನವಿ ಸಲ್ಲಿಸಿ, ಅವಶ್ಯಕತೆ ಮೇರೆಗೆ ಚುನಾವಣೆ ಮುಂಚೆ 130 ದಿನಗೂಲಿ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದು, ಈಗ ಕೆಲಸದಿಂದ ವಜಾಗೊಳಿಸಿ ಬೀದಿ ಪಾಲು ಮಾಡಲಾಗಿದೆ ಎಂದು ದೂರಿದರು.
ನಗರಸಭೆ ಅಕಾರಿಗಳಲ್ಲಿ ಯಾವ ಆಧಾರದಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎನ್ನುವ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಜತೆಗೆ ಕಾರ್ಮಿಕರು ಕಾರ್ಯನಿರ್ವಹಿಸಿದ ಮೂರು ತಿಂಗಳ ವೇತನ ಪಾವತಿ ಮಾಡಲಾಗಿಲ್ಲ. ಇದರಿಂದ ಕಾರ್ಮಿಕರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.
ನಗರದಲ್ಲಿ ಸ್ವಚ್ಛತೆ ಕೆಲಸಗಳು ನಿತ್ಯ ನಿರಂತರವಾಗಿದ್ದು, ಕಾರ್ಮಿಕರ ಅಗತ್ಯವಿದೆ. ವಜಾಗೊಳಿಸಲಾದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಎ.ಉರುಕುಂದಪ್ಪ, ಪದಾಕಾರಿಗಳಾದ ನರಸಿಂಹಲು ಪೋತಗಲ್, ಎಂ.ಡಿ.ಮೂಸಾ, ಅಸ್ವಾಕ್, ಈರಣ್ಣ ನಾಯಕ, ಭೀಮರಾಯ, ಚಂದ್ರು, ಅ್ಸರ್ ಜಿಂದಾ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.