ಹಾಸನ: ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಡಿಘಟ್ಟ ಗ್ರಾಮದಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ತೆರವುಗೊಳಿಸುವ ಸಂಬಂಧ ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಭೆ ಮಾಡಿದ್ದಾರೆ. ಆದರೆ ಗ್ರಾಮ ಪಂಚಾಯಿತಿಯಿಂದ ಯಾವುದೇ ಕಟ್ಟಡಗಳನ್ನು ತೆರವುಗೊಳಿಸಿಲ್ಲ. ಆದರೂ ಕೂಡ ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಭವ್ಯಾ ಪುರುಷೋತ್ತಮ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದ ರಾಜೇಶ್, ರೂಪಾ, ಕೀರ್ತಿ, ರೂಪಾ ಉದಯ್ ಕುಮಾರ್ ಎಂಬುವರು ಸುಳ್ಳು ಆರೋಪಗಳನ್ನ ಮಾಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದಾರೆ. ಅಲ್ಲಿಗೆ ಅಧಿಕಾರಿಗಳು ಭೇಟಿ ನೀಡಿ ಸರ್ವೆ ನಡೆಸಿ ಯಾವುದೇ ಕಟ್ಟಡ ಕಟ್ಟಡದಂತೆ ಸೂಚನೆ ನೀಡಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೂಪಾ ಅವರ ತಂದೆ ಚಂದ್ರಶೇಖರ್ ಎಂಬುವರು ಈ ಹಿಂದೆ ಈ ಗ್ರಾಮದಲ್ಲಿ ವಾಸವಾಗಿದ್ದರು. ಅವರ ನಿಧನದ ನಂತರ ಅವರ ಮಕ್ಕಳು ಎಲ್ಲರೂ ಬೇರೆ ಕಡೆ ವಾಸವಾಗಿದ್ದರು. ಆದರೆ ಅವರು ವಾಸವಿದ್ದ ಮನೆಗೆ ಯಾವುದೇ ರೀತಿ ದಾಖಲಾತಿಗಳಿರಲಿಲ್ಲ. ಈಗ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಕೋಟ್ಯಂತರ ರೂ. ಬೆಲೆ ಬಾಳುವ ಜಾಗವಿರುವುದರಿಂದ ಅದನ್ನು ಕಬಳಿಸಲು ಈ ರೀತಿ ಹುನ್ನಾರ ಮಾಡಿದ್ದಾರೆ ಎಂದು ದೂರಿದರು.
ರೂಪಾ ಅವರಿಗೆ ಮನೆ ಕಟ್ಟಿಕೊಳ್ಳಲು ನಮ್ಮದೇನು ತಕರಾರಿಲ್ಲ. ಆದರೆ ಇನ್ನುಳಿದ ಎರಡು ಮನೆಗಳು ಅಕ್ರಮವಾಗಿ ಕಟ್ಟುತ್ತಿದ್ದಾರೆ. ಈ ಬಗ್ಗೆ ನಾವು ತಹಸೀಲ್ದಾರ್ ಗಮನಕ್ಕೆ ತಂದಾಗ ಅವರು ಪರಿಶೀಲನೆ ನಡೆಸಿದರು. ಆದರೆ ರಾತ್ರೋರಾತ್ರಿ ಮನೆಯನ್ನು ಕೆಡವಿ. ಈಗ ವಿನಾಃಕಾರಣ ರಾಜಕೀಯ ದುರುದ್ದೇಶದಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಆಗಲಿ ಅಥವಾ ನನ್ನ ಪತಿ ಪುರುಷೋತ್ತಮ್ ಅವರಾಗಲಿ ಯಾವುದೇ ಕಾರಣಕ್ಕೂ ಜೆಸಿಬಿ ಮೂಲಕ ಮನೆಗಳನ್ನು ಕೆಡವಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮ ಪಂಚಾಯಿತಿಗೆ ಮತ್ತು ನಮಗೆ ಕೆಟ್ಟ ಹೆಸರು ತರುವ ದೃಷ್ಟಿಯಿಂದ ಈ ರೀತಿ ಉನ್ನಾರ ಮಾಡಿದ್ದಾರೆ. ಈಗಾಗಲೇ ತಹಸೀಲ್ದಾರ್ ಅವರು ಸ್ಥಳ ಪರಿಶೀಲನೆ ಮಾಡಿ ಇಲ್ಲಿ ಯಾವುದೇ ಕಟ್ಟಡ ಕಟ್ಟಡದಂತೆ ನಿರ್ದೇಶನ ನೀಡಿದ್ದಾರೆ. ಸರಿಯಾದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ತಹಸೀಲ್ದಾರ್ ಮತ್ತು ಡಿಸಿ ಅವರಿಂದ ಅನುಮತಿ ಪಡೆದುಕೊಂಡು ಇಲ್ಲಿ ಮನೆ ಕಟ್ಟಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಮೇಶ್, ಸದಸ್ಯರಾದ ಪ್ರಕಾಶ, ನಟರಾಜ್, ವೆಂಕಟೇಶ, ಅಶ್ವತ್ ಇತರರು ಇದ್ದರು.