ಹೊಸಪೇಟೆ: ಡಾ.ವಿಷ್ಣುವರ್ಧನ್ ಸೇವಾ ಸಮಿತಿಯಿಂದ ನಗರದ ಬಳ್ಳಾರಿ ರಸ್ತೆಯ ಎಚ್‌ಎಲ್‌ಸಿ ಕಾಲುವೆ ಬಳಿ ಆಲದ ಮರ ಕೆಳಗೆ ಸಹಾಸಸಿಂಹ ನಟ ದಿ.ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ ಬುಧವಾರ ಆಚರಿಸಲಾಯಿತು.
ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಮಾತನಾಡಿ, ಡಾ.ವಿಷ್ಣುವರ್ಧನ್ ಮತ್ತು ಡಾ.ರಾಜ್‌ಕುಮಾರ್ ಅವರು ಕನ್ನಡ ಕಲಾ ಜಗತ್ತಿನ ಎರಡು ಕಣ್ಣುಗಳು. ಮಹಾನ್ ನಟರ ನಡುವೆಯೂ ಮೊದಲ ಚಿತ್ರದಿಂದ ಕೊನೆಯ ಚಿತ್ರದವರೆಗೆ ಅಭಿಮಾನಿಗಳಿಗೆ ರಸದೌತನ ಉಣಬಡಿಸಿದ ಮಹಾನ್ ನಟ ಎಂದು ಸ್ಮರಿಸಿದರು.
ಪ್ರಮುಖರಾದ ತಾರಿಹಳ್ಳಿ ಜಂಬುನಾಥ, ಚಂದ್ರಶೇಖರ, ಪಂತರ್ ಜಯಂತ್, ಚಂದ್ರಶೇಖರ ಶಾಸ್ತ್ರೀ ಇತರರಿದ್ದರು.