ಬಾಗಲಕೋಟೆ: ದಾಸೋಹಕ್ಕಾಗಿ ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿ ತಂದು ಮಾಡುವ ದಾಸೋಹ ಲಿಂಗಕ್ಕೆ ನೈವೇದ್ಯವಾಗಿ ಸಲ್ಲುವುದಿಲ್ಲ. ಭಕ್ತನಾದವನು ತನುವನ್ನು ಕರಗಿಸಿ ಮನವನ್ನು ಬಳಲಿಸಿ ತನ್ನ ಸ್ವಂತ ಕಾಯಕದ ಸಂಪಾದನೆಯಿಂದ ಗುರು ಲಿಂಗ ಜಂಗಮ ದಾಸೋಹವನ್ನು ಮಾಡಬೇಕು. ಕಾಯಕದಿಂದ ಬಂದುದು ಮಾತ್ರ ಲಿಂಗ ಜಂಗಮಕ್ಕೆ ಅರ್ಪಿತವಾಗಬೇಕು. ಈ ಕಾಯಕ ಗುರು, ಲಿಂಗ ಜಂಗಮರೆಲ್ಲರಿಗೂ ಕಡ್ಡಾಯವೆಂದು ಸಾರಿದ್ದಾರೆ ನೂಲಿಯ ಚಂದಯ್ಯನವರು. ಇವರ ಪ್ರಕಾರ ಕಾಯಕದ ಮೂಲಕವೇ ಸದ್ಗತಿ, ಆತ್ಮೋನ್ನತಿ. ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಶ್ರೀ ಶರಣಬಸವ ಅಪ್ಪಂಗಳ ಆಶ್ರಮದ ಗುರುಕುಲದಲ್ಲಿ ಜರುಗಿದ ನೂಲಿಯ ಚಂದಯ್ಯ ಜಯಂತಿಯ ಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿರವರು.
‘ಚಂದೇಶ್ವರ’ ಅಂಕಿತದಲ್ಲಿ 48 ವಚನಗಳು ದೊರೆತಿವೆ. ಎಲ್ಲವೂ ಕಾಯಕ ಮೌಲ್ಯವನ್ನು ಎತ್ತಿ ಹಿಡಿಯುತ್ತವೆ. ಗುರು, ಲಿಂಗ, ಜಂಗಮ ಎಲ್ಲರಿಗೂ ಕಾಯಕ ಕಡ್ಡಾಯ. ಭಾವ ಶುದ್ಧ, ಗುರು ಲಿಂಗ ಜಂಗಮ ಮತ್ತು ದಾಸೋಹ ಚಿತ್ತಶುದ್ಧ, ಭಾವಶುದ್ಧ, ಶುದ್ಧಾತ್ಮ, ಸುಜ್ಞಾನ, ಕಾಯ ಮತ್ತು ಜೀವ, ಗುರು ಮತ್ತು ಶಿಷ್ಯ, ವಿಶ್ವಾಸ, ತ್ರಿಕರಣ ಪೂಜೆ, ಭವಬಂಧನ, ಉತ್ಪತ್ಯ, ಸ್ಥಿತಿ, ಲಯ, ಮನ-ಮೋಹಿತ, ಗುಣ ಮತ್ತು ದೋಷ, ಇಹ ಮತ್ತು ಪರ, ನಾನು ಮತ್ತು ನೀನು, ಪ್ರಕೃತಿ, ನಡೆ ಮತ್ತು ನುಡಿ, ಸುಖ-ದುಃಖ, ಭೋಗ, ಮುಕ್ತಿಯ ಪಥ ಕಾಣುತ್ತೇವೆ ಎಂದರು.